ಬ್ಲಾಂಟೈರ್, ಮಲಾವಿ (ಎಪಿ): ದಕ್ಷಿಣ ಆಫ್ರಿಕಾವನ್ನು ಜರ್ಜರಿತಗೊಳಿಸಿರುವ ಫೆಡ್ಡಿ ಚಂಡಮಾರುತವು ಮಲಾವಿ ಮತ್ತು ಮೊಜಾಂಬಿಕ್‌ಗೆ ಶನಿವಾರ ರಾತ್ರಿ ಎರಡನೇ ಬಾರಿ ಅಪ್ಪಳಿಸಿದ್ದು, ಇಲ್ಲಿಯವರೆಗೆ ಕನಿಷ್ಠ 44 ಮಂದಿಯನ್ನು ಬಲಿ ತೆಗೆದುಕೊಂಡಿದೆ ಎಂದು ಎರಡೂ ದೇಶಗಳ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮಲಾವಿಯ ವಾಣಿಜ್ಯ ನಗರ ಬ್ಲಾಂಟೈರ್‌ನಲ್ಲಿ ಕನಿಷ್ಠ 39 ಮಂದಿ ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ ಮತ್ತು ಕಾಣೆಯಾಗಿದ್ದಾರೆ ಎಂದು ನಗರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮವಾರ ಮಾಧ್ಯಮವರಿಗೆ ತಿಳಿಸಿದ್ದಾರೆ. ಜೊತೆಗೆ ಮೊಜಾಂಬಿಕ್‌ನಲ್ಲಿ ಶನಿವಾರದಿಂದ ಇಲ್ಲಿಯವರೆಗೆ ಐದು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.