ಕೊರೊನಾವೈರಸ್: ಮೆಲ್ಬರ್ನ್‌ನಲ್ಲಿ 3ನೇ ಹಂತದ ಲಾಕ್‌ಡೌನ್

ಮೆಲ್ಬರ್ನ್: ವಿಕ್ಟೋರಿಯಾ ಭಾಗದಲ್ಲಿ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕಾಗಿ ಶುಕ್ರವಾರದಿಂದ ಮೂರನೇ ಹಂತದ ಲಾಕ್‌ಡೌನ್ ಘೋಷಿಸಲಾಗಿದೆ.
ರಾಜ್ಯ ರಾಜಧಾನಿಯಿಂದ ವೈರಸ್ ಹರಡುವುದನ್ನು ನಿಯಂತ್ರಿಸಲು ವಿಕ್ಟೋರಿಯಾ ರಾಜ್ಯದಾದ್ಯಂತ ಐದು ದಿನಗಳ ಲಾಕ್‌ಡೌನ್ ಜಾರಿಗೊಳಿಸಲಾಗಿದೆ ಎಂದು ವಿಕ್ಟೋರಿಯಾದ ಮುಖ್ಯಸ್ಥ ಡೇನಿಯಲ್ ಆ್ಯಂಡ್ರೂಸ್ ಹೇಳಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯನ್ನು ಮುಂದುವರಿಸಲು ಅವಕಾಶ ನೀಡಲಾಗುವುದು. ಪ್ರೇಕ್ಷಕರಿಗೆ ನೇರವಾಗಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಹಾರಾಟ ಆರಂಭಿಸಿರುವ ವಿಮಾನಗಳಿಗೆ ಮಾತ್ರವೇ ಲಾಕ್‌ಡೌನ್ ಸಂದರ್ಭದಲ್ಲಿ ಬಳಿಕ ಮೆಲ್ಬರ್ನ್ ವಿಮಾನ ನಿಲ್ದಾಣದಲ್ಲಿ ಇಳಿಯಲು ಅವಕಾಶ ನೀಡಲಾಗುವುದು. ಶಾಲೆಗಳು ಮತ್ತು ಅನೇಕ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ಅಗತ್ಯ ಸಾಮಗ್ರಿಗಳ ಖರೀದಿಗೆ ಮಾತ್ರವೇ ಮನೆಯಿಂದ ಹೊರಬರುವಂತೆ ಸ್ಥಳೀಯರಿಗೆ ಸೂಚಿಸಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.