ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಉತ್ಪಾದಿತ ಕ್ಯಾಮೆರಾಗಳನ್ನು ತೆಗೆದುಹಾಕಲು ಆಸ್ಟ್ರೇಲಿಯಾ ನಿರ್ಧಾರ

Last Updated 9 ಫೆಬ್ರುವರಿ 2023, 10:46 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ: ಚೀನಾದ ಕಮ್ಯುನಿಸ್ಟ್‌ ಪಾರ್ಟಿಯೊಂದಿಗೆ ಸಂಪರ್ಕ ಹೊಂದಿರುವ ಕಂಪನಿಗಳು ಉತ್ಪಾದಿಸಿರುವ ಕ್ಯಾಮೆರಾಗಳನ್ನು ತನ್ನ ಕಟ್ಟಡಗಳಿಂದ ತೆಗೆದು ಹಾಕಲು ರಕ್ಷಣಾ ಇಲಾಖೆ ನಿರ್ಧರಿಸಿದೆ ಎಂದು ಆಸ್ಟ್ರೇಲಿಯಾ ಸರ್ಕಾರ ಗುರುವಾರ ತಿಳಿಸಿದೆ.

ಅಮೆರಿಕ ಹಾಗೂ ಬ್ರಿಟನ್‌ ಸರ್ಕಾರಗಳು ಇಂಥದೇ ಕ್ರಮ ಕೈಗೊಂಡ ಬೆನ್ನಲ್ಲೇ, ಆಸ್ಟ್ರೇಲಿಯಾ ಕೂಡ ತನ್ನ ಈ ನಿಲುವನ್ನು ಪ್ರಕಟಿಸಿದೆ.

ಕ್ಯಾಮೆರಾಗಳು,ಇಂಟರ್‌ಕಾಮ್‌, ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿರುವ ಸಾಧನಗಳು, ವಿಡಿಯೊ ರೆಕಾರ್ಡಿಂಗ್‌ ಉಪಕರಣಗಳು ಸೇರಿದಂತೆ ಕನಿಷ್ಠ 913 ಸಾಧನಗಳನ್ನು ರಕ್ಷಣಾ ಇಲಾಖೆ, ವಿದೇಶಾಂಗ ವ್ಯವಹಾರ ಮತ್ತು ವಾಣಿಜ್ಯ ಇಲಾಖೆಗೆ ಸೇರಿದ ಕಟ್ಟಡಗಳಲ್ಲಿ ಅಳವಡಿಸಲಾಗಿದೆ. ಈ ಸಾಧನಗಳನ್ನು ಚೀನಾದ ಕಂಪನಿಗಳಾದ ‘ಹಿಕ್‌ವಿಷನ್’ ಹಾಗೂ ‘ದಹುವಾ’ ತಯಾರಿಸಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಚೀನಾದ ಕಮ್ಯುನಿಸ್ಟ್‌ ಪಾರ್ಟಿ ನೇತೃತ್ವದ ಸರ್ಕಾರವು ‘ಹಿಕ್‌ವಿಷನ್’ ಹಾಗೂ ‘ದಹುವಾ’ ಕಂಪನಿಗಳ ಭಾಗಶಃ ಮಾಲೀಕತ್ವ ಹೊಂದಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

‘ರಕ್ಷಣಾ ಇಲಾಖೆಯು ಹೊಂದಿರುವ ಕಣ್ಗಾವಲು ತಂತ್ರಜ್ಞಾನದ ಸಮಗ್ರ ಪರಿಶೀಲನೆ ನಡೆಸಲಾಗುವುದು’ ಎಂದು ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT