ಜರ್ಮನಿ ಬಲಪಂಥೀಯ ತೀವ್ರಗಾಮಿಗಳಿಗೆ ಮಾರಲು ಸಾಗಿಸುತ್ತಿದ್ದ ಅಪಾರ ಶಸ್ತ್ರಾಸ್ತ್ರ ವಶ

ಬರ್ಲಿನ್ (ಜರ್ಮನಿ): ಜರ್ಮನಿಯ ಬಲಪಂಥೀಯ ತೀವ್ರಗಾಮಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಣೆ ಮಾಡುತ್ತಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಆಸ್ಟ್ರಿಯಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
‘70 ಸ್ವಯಂಚಾಲಿತ ಬಂದೂಕುಗಳು, 1 ಲಕ್ಷಕ್ಕೂ ಅಧಿಕ ಸ್ಫೋಟಕಗಳು, ಹಲವು ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. 53 ವರ್ಷದ ಆಸ್ಟ್ರಿಯಾ ಪ್ರಜೆ ಈ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಎಂಬುದಾಗಿ ಶಂಕಿಸಲಾಗಿದೆ’ ಎಂದು ಆಂತರಿಕ ಭದ್ರತಾ ಸಚಿವ ಕಾರ್ಲ್ ನೆಹಮ್ಮರ್ ತಿಳಿಸಿದರು.
‘ಸಂಘಟಿತ ಅಪರಾಧ ಕೃತ್ಯಗಳನ್ನು ಎಸಗುತ್ತಿರುವ ಗುಂಪುಗಳು ಹಾಗೂ ಬಲಪಂಥೀಯ ತೀವ್ರಗಾಮಿಗಳ ನಡುವೆ ಸಂಪರ್ಕ ಇದೆ ಎಂಬುದು ಪೊಲೀಸ್ ಕಾರ್ಯಾಚರಣೆ ವೇಳೆ ಬಹಿರಂಗಗೊಂಡಿದೆ’ ಎಂದೂ ಅವರು ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.