ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಂಟಿವೈರಸ್‌ ಜನಕ ಜಾನ್‌ ಮ್ಯಾಕ್‌ಫೀ ಆತ್ಮಹತ್ಯೆ: ಮರಣೋತ್ತರ ಪರೀಕ್ಷೆಯಲ್ಲಿ ದೃಢ 

Last Updated 30 ಜೂನ್ 2021, 8:10 IST
ಅಕ್ಷರ ಗಾತ್ರ

ನ್ಯೂರ್ಯಾಕ್‌: ಆ್ಯಂಟಿವೈರಸ್‌ ಜನಕ ಎಂದೇ ಖ್ಯಾತರಾಗಿದ್ದ ಜಾನ್‌ ಮ್ಯಾಕ್‌ಫೀ ಆತ್ಮಹತ್ಯೆ ಮಾಡಿಕೊಂಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಸ್ಪೇನ್‌ ದೇಶದ ಪೊಲೀಸರು ತಿಳಿಸಿದ್ದಾರೆ.

ಜೂನ್‌ 23ರಂದು ಬಾರ್ಸಿಲೋನಾದ ಜೈಲಿನಲ್ಲಿ ಮ್ಯಾಕ್‌ಫೀ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿನ ಬಗ್ಗೆ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದವು. ಮ್ಯಾಕ್‌ಫೀ ಕುಟುಂಬದವರು ಇದು ಕೊಲೆ ಎಂದು ಆರೋಪ ಮಾಡಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಮ್ಯಾಕ್‌ಫೀ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ ಎಂದು ಪೊಲೀಸ್‌ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ತೆರಿಗೆ ವಂಚನೆ ಆರೋಪದಲ್ಲಿ ಮ್ಯಾಕ್‌ಫೀ ಅಮೆರಿಕದಿಂದ ಪರಾರಿಯಾಗಿದ್ದರು. ಇವರನ್ನು ಬಾರ್ಸಿಲೋನಾದಲ್ಲಿ ಬಂಧಿಸಿ ಸ್ಥಳೀಯ ಜೈಲಿನಲ್ಲಿ ಇಡಲಾಗಿತ್ತು.

ಮ್ಯಾಕ್‌ಫೀ ಆ್ಯಂಟಿವೈರಸ್‌ ಅನ್ನು 50 ಕೋಟಿಗೂ ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ.ಮ್ಯಾಕ್‌ಫೀ, 1987ರಲ್ಲಿ ಆ್ಯಂಟಿವೈರಸ್‌ ಸಾಫ್ಟ್‌ವೇರ್‌ ಅನ್ನು ಅಭಿವೃದ್ಧಿಪಡಿಸಿದ್ದರು. 2011ರಲ್ಲಿ ತಮ್ಮ ಕಂಪನಿಯನ್ನು ಇಂಟೆಲ್‌ಗೆ ಮಾರಾಟ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT