ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

53 ದೇಶಗಳಲ್ಲಿ ಬಿ.1.617 ಮಾದರಿ ಕೊರೊನಾ ವೈರಾಣು ಪತ್ತೆ: ಡಬ್ಲುಎಚ್‌ಒ

Last Updated 27 ಮೇ 2021, 11:06 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ/ಜಿನಿವಾ (ಪಿಟಿಐ):ಭಾರತದಲ್ಲಿ ಮೊದಲು ಪತ್ತೆಯಾದ ಬಿ.1.617 ಕೊರೊನಾ ವೈರಾಣು ಈಗ 53 ದೇಶಗಳಲ್ಲಿ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ. ಮೇ 25ರಂದು ಈ ವರದಿ ಪ್ರಕಟವಾಗಿದೆ.

ಬಿ.1.617 ಕೊರೊನಾ ವೈರಾಣು ‘ಕಳವಳಕಾರಿ ಮಾದರಿ‘ ಎಂದು ಡಬ್ಲುಎಚ್‌ಒ ಘೋಷಿಸಿದೆ. ಈ ಮಾದರಿ ವೈರಸ್‌ ಹರಡುವಿಕೆ ವೇಗವನ್ನು ಹೆಚ್ಚಿಸಿಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕಾಯಿಲೆಯ ಗಂಭೀರತೆ, ಸೋಂಕು ಮರುಕಳಿಸುವಿಕೆ ಕುರಿತು ಸಂಶೋಧನೆ ನಡೆಸಲಾಗುತ್ತಿದೆ ಎಂದು ಹೇಳಿದೆ.

ಬಿ.1.617 ಕೊರೊನಾ ವೈರಾಣು ಮಾದರಿಯಲ್ಲಿ ಬಿ.1.617.1, ಬಿ.1.617.2, ಬಿ.1.617.3 ಎಂಬ ಮೂರು ಉಪಮಾದರಿಗಳಿವೆ. ಅವುಗಳಲ್ಲಿ ಬಿ.1.617.1 ಮಾದರಿ ವೈರಾಣು 41 ದೇಶಗಳಲ್ಲಿ ಹರಡಿದೆ. ಬಿ.1.617.2 ವೈರಾಣು ಮಾದರಿ 54 ದೇಶಗಳಲ್ಲಿ ಮತ್ತು ಬಿ.1.617.3 ವೈರಾಣು 6 ದೇಶಗಳಲ್ಲಿ ಹರಡಿದೆ. ಚೀನಾ ಸೇರಿದಂತೆ ಇನ್ನೂ 11 ದೇಶಗಳಲ್ಲಿ ಬಿ.1.617.1 ಮತ್ತು ಬಿ.1.617.2 ವೈರಾಣು ಮಾದರಿ ಹರಡಿರುವ ಮಾಹಿತಿ ದೊರೆತಿದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಬ್ಲ್ಯುಎಚ್ಒ ತಿಳಿಸಿದೆ.

ಜೊತೆಗೆ, ಭಾರತದಲ್ಲಿ ಕಳೆದ 7 ದಿನಗಳಲ್ಲಿ ಹೊಸ ಸೋಂಕು ಪ್ರಕರಣಗಳು ಶೇ 23ರಷ್ಟು ಕಡಿಮೆ ಆಗಿವೆ. ಆದರೆ ಜಾಗತಿಕವಾಗಿ ಭಾರತ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ. ಕಳೆದ ವಾರಕ್ಕೆ ಹೋಲಿಸಿದರೆ ಜಾಗತಿಕವಾಗಿಯೂ ಹೊಸ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಈ ವಾರ ಹೊಸದಾಗಿ 41 ಲಕ್ಷ ಹೊಸ ಸೋಂಕು ಪ್ರಕರಣಗಳು ಮತ್ತು 84,000 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಹೊಸ ಸೋಂಕು ಪ್ರಕರಣಗಳು ಶೇ 14ರಷ್ಟು ಮತ್ತು ಮರಣದ ಪ್ರಮಾಣ ಶೇ 2ರಷ್ಟು ಕಡಿಮೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕಳೆದ ಏಳು ದಿನಗಳಲ್ಲಿ ಅತಿ ಹೆಚ್ಚು ಅಂದರೆ 18,46,055 ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ. ನಂತರದ ಸ್ಥಾನಗಳಲ್ಲಿ ಬ್ರೆಜಿಲ್‌(4,51,424) ಮತ್ತು ಅರ್ಜೆಂಟೀನಾ(2,13,046), ಅಮೆರಿಕ(1,88,410) ಇವೆ. ಕಳೆದ ನಾಲ್ಕು ವಾರಗಳಲ್ಲಿ ಜಾಗತಿಕವಾಗಿ ಕೋವಿಡ್‌ ಸೋಂಕು ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದರೂ. ಹಲವು ದೇಶಗಳಲ್ಲಿ ಸೋಂಕು ಪ್ರಕರಣ ಮತ್ತು ಮರಣದ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT