ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12-17 ವರ್ಷದ ಮಕ್ಕಳಿಗೂ ನಮ್ಮ ಲಸಿಕೆ ಬಳಸಬಹುದು: ಮಾಡರ್ನಾ ಘೋಷಣೆ

Last Updated 25 ಮೇ 2021, 13:40 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಮಾಡರ್ನಾ ಲಸಿಕೆಯು 12 ವರ್ಷದ ವರೆಗಿನ ಮಕ್ಕಳಿಗೆ ಕೋವಿಡ್‌ ವಿರುದ್ಧ ಬಲವಾದ ರಕ್ಷಣೆ ನೀಡುತ್ತದೆ ಎಂದು ಸಂಸ್ಥೆ ಹೇಳಿದೆ. ಆಮೆರಿಕದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಇಚ್ಚಿಸುವ ಮಕ್ಕಳಿಗೆ ಇದು ಮತ್ತೊಂದು ಆಯ್ಕೆ ಎಂದೂ ಮಾಡರ್ನಾ ತಿಳಿಸಿದೆ.

ಮಕ್ಕಳ ಮೇಲೆ ನಡೆಸಿದ ಅಧ್ಯಯನ ವರದಿಯನ್ನು ಶೀಘ್ರದಲ್ಲೇ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ ಮತ್ತು ಇತರ ಇಲಾಖೆಗಳಿಗೆ ನೀಡುವುದಾಗಿ ಮಾಡರ್ನಾ ಹೇಳಿದೆ.

ಕಂಪನಿಯು 12 ರಿಂದ 17 ವರ್ಷದ 3,700 ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಿ ಅಧ್ಯಯನ ನಡೆಸಿದೆ. ಲಸಿಕೆಯು ವಯಸ್ಕರಂತೇ ಮಕ್ಕಳಲ್ಲೂ ರೋಗನಿರೋಧಕ ರಕ್ಷಣೆಯ ಅದೇ ಲಕ್ಷಣಗಳನ್ನು ಪ್ರಚೋದಿಸಿದೆ. ಅಲ್ಲದೆ, ಸಾಮಾನ್ಯ ಪರಿಣಾಮಗಳನ್ನೂ ತೋರಿಸಿದೆ ಎಂದೂ ಮಾಡರ್ನಾ ಹೇಳಿದೆ.

ಲಸಿಕೆಯ ಎರಡು ಡೋಸ್‌ ಪಡೆದ ಮಕ್ಕಳಲ್ಲಿ ಕೋವಿಡ್‌ ಕಾಣಿಸಿಕೊಳ್ಳದೇ ಇರುವುದು ದೃಢವಾಗಿದೆ. ಅಲ್ಲದೆ, ಮೊದಲ ಡೋಸ್‌ ಪಡೆದ ಎರಡು ವಾರಗಳಲ್ಲೇ ಲಸಿಕೆಯು ಶೇ 93 ರಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿದೆ ಎಂದು ಕಂಪನಿ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಮಕ್ಕಳು ಕೋವಿಡ್‌ನ ಗಂಭೀರ ಪರಿಣಾಮಗಳಿಗೆ ತುತ್ತಾಗುವ ಪ್ರಮಾಣ ಕಡಿಮೆ. ಅದರೂ, ಅಮೆರಿಕದ ಒಟ್ಟಾರೆ ಕೋವಿಡ್‌ ಪ್ರಕರಣಗಳಲ್ಲಿ ಮಕ್ಕಳ ಪಾಲು ಶೇ. 14 ಆಗಿದೆ.

ಅಮೆರಿಕದಲ್ಲಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಬಳಕೆಗಾಗಿ ಫೈಜರ್‌ ಮತ್ತು ಬಯೋಎನ್‌ಟೆಕ್‌ನ ಲಸಿಕೆಗಳಿಗೆ ಈಗಾಗಲೇ ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT