ಸೋಮವಾರ, ಮಾರ್ಚ್ 27, 2023
32 °C

ಕೊರೊನಾ ವೈರಸ್‌ಅನ್ನು ದೇಹಕ್ಕೆ ಇಂಜೆಕ್ಟ್‌ ಮಾಡಿಸಿಕೊಳ್ಳಲಿದ್ದ ಬ್ರಿಟನ್‌ ಪ್ರಧಾನಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಲಂಡನ್‌: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಕೊರೊನಾ ವೈರಸ್‌ ಅನ್ನು ಇಂಜೆಕ್ಟ್‌ ಮಾಡಿಸಿಕೊಳ್ಳುವ ಚಿಂತನೆಯಲ್ಲಿದ್ದರು ಎಂದು ಅವರ ಒಂದು ಕಾಲದ ಆಪ್ತ ಡೋಮಿನಿಕ್‌ ಕಮ್ಮಿಂಗ್ಸ್‌ ಬ್ರಿಟನ್‌ ಸಂಸತ್‌ನಲ್ಲೆ ಹೇಳಿದ್ದಾರೆ.

'ಕೋವಿಡ್‌ ಎಂಬುದು ಕೇವಲ ಭೀತಿಯಷ್ಟೇ ಎಂದು ಪ್ರಧಾನಿ ಜಾನ್ಸನ್‌ ಅವರು ಪರಿಗಣಿಸಿದ್ದರು. ಕೊರೊನಾ ವೈರಸ್‌ ಅನ್ನು ಅವರು ಕಡೆಗಣಿಸಿದ್ದರು,' ಎಂದು ಕಮ್ಮಿಂಗ್ಸ್‌ ಹೇಳಿದ್ದಾರೆ.

'ಕೋವಿಡ್‌ ಸಾಂಕ್ರಾಮಿಕ ತಡೆಯುವ ಕ್ರಿಯಾ ಯೋಜನೆ ರೂಪಿಸುವಲ್ಲಿ ಜಾನ್ಸನ್‌ ಅಸ್ಥೆ ವಹಿಸಿರಲಿಲ್ಲ. ಪ್ರಧಾನಿ ನೇತೃತ್ವದಲ್ಲಿ ನಡೆದಿದ್ದ 'ಸಿಒಬಿಆರ್‌' ತುರ್ತು ಸಭೆಯಲ್ಲಿದ್ದ ಅಧಿಕಾರಿಗಳು ಈ ಬಗ್ಗೆ ಚಿಂತಿತರಾಗಿದ್ದರು,' ಎಂದೂ ಕಮ್ಮಿಂಗ್ಸ್‌ ಆರೋಪಿಸಿದ್ದಾರೆ.

'ಇದು ಕೇವಲ ಹಂದಿ ಜ್ವರ ಮಾತ್ರ. ಇದರ ಬಗ್ಗೆ ಯಾರೂ ಚಿಂತೆ ಮಾಡುವ ಅಗತ್ಯವಿಲ್ಲ. ಈ ಕೊರೊನಾ ವೈರಸ್‌ ಅನ್ನು ಟೀವಿ ನೇರ ಪ್ರಸಾರದಲ್ಲಿ ನಾನು ದೇಹಕ್ಕೆ ಇಂಜೆಕ್ಟ್‌ ಮಾಡಿಸಿಕೊಳ್ಳಲಿದ್ದೇನೆ. ಮುಖ್ಯ ವೈದ್ಯಾಧಿಕಾರಿ ಕ್ರಿಸ್‌ ವಿಟ್ಟಿ ಇಂಜೆಕ್ಟ್‌ ಮಾಡಲಿದ್ದಾರೆ. ಇದಕ್ಕೆ ಯಾರೂ ಭಯಪಡಬೇಕಾಗಿಲ್ಲ,' ಎಂದು ಆ ನಂತರ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಜಾನ್ಸನ್‌ ಹೇಳುತ್ತಲೇ ಇದ್ದರು. ನವೆಂಬರ್‌ 10ರ ವರೆಗಿನ ಎಲ್ಲ ಸಭೆಗಳಲ್ಲೂ ಅಧಿಕಾರಿಗಳಿಗೆ ಜಾನ್ಸನ್‌ ಈ ಮಾತು ಸಾಮಾನ್ಯವಾಗಿ ಹೇಳುತ್ತಿದ್ದರು,' ಎಂದು ಕಮ್ಮಿಂಗ್ಸ್‌ ಹೇಳಿದ್ದಾರೆ.

ಆದರೆ, ಪ್ರಧಾನಿ ಅವರ ಈ ಕಾರ್ಯಗಳೆಲ್ಲವೂ ಸಾಂಕ್ರಾಮಿಕವನ್ನು ತಡೆಯುವ ದೃಷ್ಟಿಯಿಂದ ಉಪಯೋಗಕ್ಕೆ ಬಾರದಂತವಾಗಿದ್ದವು ಎಂದು ಕಮ್ಮಿಂಗ್ಸ್‌ ಸಂಸತ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು