ಢಾಕಾ: ‘ಭಾರತವು ಬಯಸಿದರೆ ದೇಶದ ಚಟ್‌ಗಾಂವ್ ಹಾಗೂ ಸಿಲ್‌ಹಟ್ ನಗರಗಳಲ್ಲಿ ಇರುವ ಬಂದರುಗಳನ್ನು ಬಳಸಿಕೊಳ್ಳಬಹುದು’ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರು ಹೇಳಿದ್ದಾರೆ.
‘ಈ ಕ್ರಮವು ದೇಶಗಳ ನಡುವಿನ ಹಾಗೂ ಜನರ ಮಧ್ಯದ ಸಂಪರ್ಕವನ್ನು ಹೆಚ್ಚಿಸುತ್ತದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಈಶಾನ್ಯ ಭಾಗದ ರಾಜ್ಯಗಳಿಗೆ ಚಟ್‌ಗಾಂವ್‌ನಲ್ಲಿರುವ ಬಂದರು ಬಹಳ ಹತ್ತಿರದಲ್ಲಿದೆ.
ಇಂಡಿಯಾ ಫೌಂಡೇಷನ್‌ನ ರಾಮ ಮಾಧವ್ ಅವರು ಹಸೀನಾ ಅವರನ್ನು ಭಾನುವಾರ ಅವರ ನಿವಾಸದಲ್ಲಿ ಭೇಟಿಯಾಗಿ ಮಾತನಾಡಿದ್ದಾರೆ. ಈ ಮಾತುಕತೆಯ ವಿವರಗಳನ್ನು ‘ಢಾಕಾ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ. ಮಾತುಕತೆಯ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಶುಭಾಶಯ ತಿಳಿಸುವಂತೆಯೂ ಮಾಧವ್ ಅವರಿಗೆ ಹಸೀನಾ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.