ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಭ್ಯ ಶೀರ್ಷಿಕೆ: ಬಿಬಿಸಿ ಕ್ಷಮೆಯಾಚನೆ

Last Updated 20 ಜನವರಿ 2023, 22:04 IST
ಅಕ್ಷರ ಗಾತ್ರ

ಲಂಡನ್: ನ್ಯೂಜಿಲೆಂಡ್‌ ಪ್ರಧಾನಿ ಜಸಿಂಡ ಆರ್ಡರ್ನ್‌ ಅವರ ದಿಢೀರ್‌ ರಾಜೀನಾಮೆ ನಿರ್ಧಾರದ ಸುದ್ದಿಗೆ ‘ಅಸಭ್ಯ’ ಶೀರ್ಷಿಕೆ ನೀಡಿದ್ದ ‘ಬಿಬಿಸಿ’ಯನ್ನು ‘ಸ್ತ್ರೀದ್ವೇಷಿ’ ಎಂದು ಸಾಮಾಜಿಕ ಜಾಲತಾಣಿಗರು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಬಿಬಿಸಿ ಸುದ್ದಿ ಮಾಧ್ಯಮ ತನ್ನ ತಪ್ಪಿನ ಅರಿವಾಗಿ ಶುಕ್ರವಾರ ಕ್ಷಮೆಯಾಚಿಸಿದೆ.

ಬಿಬಿಸಿಯ ಜಾಗತಿಕ ನ್ಯೂಸ್ ರೂಮ್‌ನ ಬಿಬಿಸಿ ವರ್ಲ್ಡ್, ಚಿಕ್ಕ ಮಗುವಿನ ತಾಯಿ ಆಗಿರುವ ಪ್ರಧಾನಿ ಜಸಿಂಡ ಅವರು ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದಾಗ ಆ ಕುರಿತ ವರದಿಗೆ ‘ಮಹಿಳೆ ಎಲ್ಲವನ್ನು ಹೊಂದಲು ಸಾಧ್ಯವೆ?’ ಎಂಬ ಅರ್ಥದ ಶೀರ್ಷಿಕೆ ನೀಡಿ, ಪೂರ್ಣ ವರದಿಯ ಲಿಂಕ್‌ ಅನ್ನು ಶೀರ್ಷಿಕೆಯೊಂದಿಗೆ ಗುರುವಾರ ಟ್ವಿಟರ್‌ನಲ್ಲಿ ಪ್ರಕಟಿಸಿತ್ತು.

‘ಶೀರ್ಷಿಕೆ ಸೂಕ್ತಲ್ಲವೆನ್ನುವುದು ಗಮನಕ್ಕೆ ಬಂದ ತಕ್ಷಣ ಶೀರ್ಷಿಕೆ ಬದಲಿ ಸಲಾಗಿದೆ. ಟ್ವೀಟ್‌ ಅನ್ನು ಅಳಿಸಲಾಗಿದೆ’ ಎಂದು ಬಿಬಿಸಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT