ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರ ತಂಡಕ್ಕೆ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ ಸೇರ್ಪಡೆಯಾಗುವ ನಿರೀಕ್ಷೆ ಇದೆ.

ಭಾರತ ಮೂಲದ ಅಮೆರಿಕನ್ ನೀರಾ ಟಂಡನ್ ಅವರನ್ನು ಬಜೆಟ್ ಮತ್ತು ನಿರ್ವಹಣಾ ಕಚೇರಿಯ ನಿರ್ದೇಶಕರನ್ನಾಗಿ ಬೈಡನ್ ನೇಮಕ ಮಾಡುವ ಸಾಧ್ಯತೆಗಳಿವೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆಡಳಿತಾತ್ಮಕ ಬಜೆಟ್ ನಿರ್ವಹಣೆಯ ಹೊಣೆ ಹೊತ್ತಿರುವ ಈ ಹುದ್ದೆಯು ಅಮೆರಿಕದ ವೈಟ್ ಹೌಸ್ನಲ್ಲಿ ಪ್ರಭಾವಿ ಸ್ಥಾನವೂ ಹೌದು.

ಅಮೆರಿಕದ ಸೆನೆಟ್ ಈ ಸಂಗತಿಯನ್ನು ದೃಢಪಡಿಸಿದೆ. ಶ್ವೇತಭವನದ ಪ್ರಭಾವಿ ಸ್ಥಾನವಾದ ಆಡಳಿತ ಬಜೆಟ್ ನಿರ್ವಹಣಾ ಕಚೇರಿಯ ಮೊದಲ ಮಹಿಳಾ ಮುಖ್ಯಸ್ಥರಾಗಿ ಟಂಡನ್ (50) ನೇಮಕವಾಗಲಿದ್ದಾರೆ. ಸದ್ಯ ಟಂಡನ್ ಅವರು ಎಡಪಂಥೀಯ 'ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್'ನ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ. 'ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್' ಎಂಬುದು ಸಾರ್ವಜನಿಕ ನೀತಿ ಸಂಶೋಧನಾ ಸಂಸ್ಥೆಯಾಗಿದ್ದು, ಆರ್ಥಿಕ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಉದಾರವಾದಿ ದೃಷ್ಟಿಕೋನ ಹೊಂದಿದೆ.

ಅಮೆರಿಕದ ಖಜಾನೆ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿರುವ ಜಾನೆಟ್ ಎಲೆನ್ ಅವರೊಂದಿಗೆ ಕಾರ್ಯನಿರ್ವಹಿಸುವ ಸಲುವಾಗಿ ಉದಾರವಾದಿ ಆರ್ಥಿಕ ಸಲಹೆಗಾರರ ತಂಡ ಕಟ್ಟುವ ಬೈಡನ್ ಅವರ ಯೋಜನೆಯ ಭಾಗವಾಗಿ ಟಂಡನ್ ಅವರನ್ನು ನೇಮಕ ಮಾಡಲಾಗುತ್ತಿದೆ ಎಂದು 'ವಾಲ್ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.

ಟಂಡನ್, ಎಲೆನ್ ಮತ್ತು ಇತರರ ಅಧಿಕೃತ ನೇಮಕವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಮೆಸಾಚ್ಯುಸೆಟ್ಸ್ನ ಬೆಡ್ಫೋರ್ಡ್ನಲ್ಲಿ 1970ರಲ್ಲಿ ಜನಿಸಿದ ನೀರಾ ಟಂಡನ್, ಭಾರತದಿಂದ ಅಮೆರಿಕಕ್ಕೆ ವಲಸೆ ಹೋದ ದಂಪತಿಯ ಪುತ್ರಿ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಕಲಾ ವಿಷಯದಲ್ಲಿ ಪದವಿ ಪಡೆದಿರುವ ಅವರು, 1996ರಲ್ಲಿ ಯಾಲೆ ವಿಶ್ವವಿದ್ಯಾಲಯದಿಂದ ಜ್ಯೂರಿಸ್ ಡಾಕ್ಟರ್ ಪದವಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.