ಭಾನುವಾರ, ಆಗಸ್ಟ್ 14, 2022
26 °C
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಮತ್ತು ಅರ್ಜೆಂಟೀನಾ ಅಧ್ಯಕ್ಷರೊಂದಿಗೆ ಮಾತುಕತೆ

ಜಾಗತಿಕವಾಗಿ ಎದುರಿಸಬೇಕಾದ ತುರ್ತು ಸಮಸ್ಯೆಗಳ ಬಗ್ಗೆ ಬೈಡನ್ ಚರ್ಚೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ‘ಕೋವಿಡ್ 19‘ ವಿರುದ್ಧದ ಹೋರಾಟವೂ ಸೇರಿದಂತೆ ಜಾಗತಿಕವಾಗಿ ಉಂಟಾಗಿರುವ ಸಮಸ್ಯೆಗಳನ್ನು ತುರ್ತಾಗಿ ಎದುರಿಸಲು ತಮ್ಮ ಪಾಲುದಾರಿಕೆ ಬಲಪಡಿಸುವ ಕುರಿತು ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಜೋ ಬೈಡನ್ ಮಂಗಳವಾರ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಅವರೊಂದಿಗೆ ಚರ್ಚೆ ನಡೆಸಿದರು.

ನಂತರ ಉಭಯ ನಾಯಕರು ಭವಿಷ್ಯದ ಸಾರ್ವಜನಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ಯೋಜನೆ ರೂಪಿಸುವುದು, ಹವಾಮಾನ ವೈಪರೀತ್ಯ ವಿರುದ್ಧದ ಹೋರಾಟ, ಸಾರ್ವತ್ರಿಕ ಸಮಸ್ಯೆಗಳು, ಸುಸ್ಥಿರ ಅಭಿವೃದ್ಧಿಯ ಮುನ್ನಡೆ, ಶಾಂತಿ ಮತ್ತು ಸುರಕ್ಷತೆ ಎತ್ತಿ ಹಿಡಿಯುವುದು, ಸಂಘರ್ಷಗಳಿಗೆ ಪರಿಹಾರ ಕಂಡು ಹಿಡಿಯುವುದು ಮತ್ತು ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ಉತ್ತೇಜಿಸುವ ಕುರಿತು ಚರ್ಚಿಸಿದರು.

ಇದೇ ಸಂದರ್ಭದಲ್ಲಿ ಜೋ ಬೈಡನ್ ಅವರು ಇಥಿಯೋಪಿಯಾದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಅದರಿಂದ ನಾಗರಿಕರು ಅನುಭವಿಸುತ್ತಿರುವ ಸಂಕಟದ ಬಗ್ಗೆ ಕಳವಳ ವ್ಯಕ್ತಪಡಿಸಿ, ಅದನ್ನು ತಡೆಯುವ ಕುರಿತು ಕಾಳಜಿ ತೋರಿದರು. 

ನಂತರ ಬೈಡನ್ ಅವರು ಅರ್ಜೆಂಟೀನಾದ ಅಧ್ಯಕ್ಷ ಆಲ್ಬರ್ಟೊ ಫರ್ನಾಂಡಿಸ್‌ ಅವರೊಂದಿಗೆ ಮಾತನಾಡಿ, ಕೋವಿಡ್ 19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು