ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗ ಮದುವೆ ಮಸೂದೆಗೆ ಅಂಗೀಕಾರ

Last Updated 9 ಡಿಸೆಂಬರ್ 2022, 14:17 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಸಲಿಂಗ ಮದುವೆ ಮಸೂದೆಗೆ ಜನಪ್ರತಿನಿಧಿಗಳ ಸಭೆ ಗುರುವಾರ ಒಪ್ಪಿಗೆ ನೀಡಿದೆ.ಈ ಮಸೂದೆಗೆ ಸಹಿ ಮಾಡುವುದಾಗಿ ಅಧ್ಯಕ್ಷ ಜೋ ಬೈಡನ್‌ ಅವರು ಈಗಾಗಲೇ ಹೇಳಿದ್ದಾರೆ. ಆದ್ದರಿಂದ ದೇಶದಾದ್ಯಂತ ನಡೆದ ದಶಕಗಳ ಹೋರಾಟಕ್ಕೆ ಸಿಕ್ಕ ಜಯ ಇದಾಗಿದೆ.

ಸಲಿಂಗ ಮದುವೆಯನ್ನು ಕಾನೂನುಬದ್ಧಗೊಳಿಸಿ 2015ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ನಂತರ ಮದುವೆ ಆದ ನೂರಾರು ಜೋಡಿಗಳು ಇಂದು ನಿಟ್ಟುಸಿರುಬಿಟ್ಟಿದ್ದಾರೆ. ಮಹಿಳೆಯಿಂದ ಗರ್ಭಪಾತದ ಹಕ್ಕನ್ನು ಸುಪ್ರೀಂ ಕೋರ್ಟ್‌ ಈ ಜೂನ್‌ನಲ್ಲಿ ಹಿಂಪಡೆದಿತ್ತು. ಈ ಹಿನ್ನೆಲೆಯಲ್ಲಿ ಸಲಿಂಗ ಮದುವೆಯ ಹಕ್ಕನ್ನು ನಿರಾಕರಿಸಬಹುದು ಎಂಬ ಆತಂಕ ಸಲಿಂಗ ಜೋಡಿಗಳಲ್ಲಿತ್ತು.

ಜನಪ್ರತಿನಿಧಿಗಳ ಸಭೆಯಲ್ಲಿ, 258 ಮಂದಿ ಮಸೂದೆಯ ಪರ ಮತ ಚಲಾಯಿಸಿದರೆ, 169 ಮಂದಿ ವಿರೋಧಿಸಿದರು.‘ಈ ಮಸೂದೆಗೆ ಒಪ್ಪಿಗೆ ಸಿಕ್ಕಿರುವುದು ಪ್ರೀತಿ ಮತ್ತು ಸ್ವಾತಂತ್ರ್ಯದ ಜಯ’ ಎಂದು ಸ್ಪೀಕರ್‌ ನ್ಯಾನ್ಸಿ ಪೆಲೊಸಿ ಅಭಿಪ್ರಾಯಪಟ್ಟರು. ಕಳೆದ ವಾರ ಸೆನೆಟ್‌ ಈ ಮಸೂದೆಗೆ ಪಕ್ಷಾತೀತವಾಗಿ ಒಪ್ಪಿಗೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT