ಶನಿವಾರ, ನವೆಂಬರ್ 26, 2022
24 °C

ರಾಜಪಕ್ಸ ಸಹೋದರರನ್ನು ಭೇಟಿ ಮಾಡಿದ ಬಿಜೆಪಿ ನಾಯಕ ಸುಬ್ರಮಣಿಯನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ: ಬಿಜೆಪಿಯ ಹಿರಿಯ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಗುರುವಾರ ಇಲ್ಲಿ ಗೋಟಬಯ ಸಹೋದರರನ್ನು ಭೇಟಿ ಮಾಡಿದರು.

ಶ್ರೀಲಂಕಾದಿಂದ ಪಲಾಯನ ಮಾಡಿ, ಕೊಲಂಬೊಗೆ ಹಿಂದಿರುಗಿದ ಬಳಿಕ ಮಾಜಿ ಅಧ್ಯಕ್ಷ ಗೋಟಬಯ ಅವರನ್ನು ಭೇಟಿ ಮಾಡಿದ ಮೊದಲ ವಿದೇಶಿ ಸಂದರ್ಶಕ ಸುಬ್ರಮಣಿಯನ್‌ ಅವರಾಗಿದ್ದಾರೆ.

ರಾಷ್ಟ್ರೀಯ ಭದ್ರತೆ ಕುರಿತು ಜನರಲ್ ಸರ್ ಜಾನ್ ಕೋಟೆಲಾವಾಲಾ ರಕ್ಷಣಾ ವಿಶ್ವವಿದ್ಯಾಲಯದ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಶ್ರೀಲಂಕಾಕ್ಕೆ ಬಂದಿರುವ ಸುಬ್ರಮಣಿಯನ್‌ ಅವರು, ಬುಧವಾರ ಸಂಜೆ ಗೋಟಬಯ ಅವರ ತಮ್ಮ ಮಹಿಂದ ರಾಜಪಕ್ಸ ಅವರನ್ನು ಭೇಟಿಯಾಗಿ, ಅವರ ನಿವಾಸದಲ್ಲಿ ನಡೆಯುತ್ತಿದ್ದ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡರು ಎಂದು ಗುರುವಾರ ಮೂಲಗಳು ತಿಳಿಸಿವೆ.

‘ರಾಜಪಕ್ಸ ಸಹೋದರರ ಆಪ್ತ ಸ್ನೇಹಿತರಾದ ಸುಬ್ರಮಣಿಯನ್‌, ಬುಧವಾರ ರಾತ್ರಿ ಮಹಿಂದ ರಾಜಪಕ್ಸ ಅವರ ಅಧಿಕೃತ ನಿವಾಸದಲ್ಲಿ ನಡೆದ ನವರಾತ್ರಿ ಪೂಜೆಯಲ್ಲಿ ಭಾಗಿಯಾಗಿ, ಗುರುವಾರ ಬೆಳಿಗ್ಗೆ ಗೋಟಬಯ ರಾಜಪಕ್ಸ ಅವರನ್ನು ಭೇಟಿಯಾಗಿದ್ದರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು