ಶನಿವಾರ, ಮೇ 28, 2022
21 °C

ಬೂಕರ್ ಪ್ರಶಸ್ತಿ ವಿಜೇತ ಕಾದಂಬರಿಕಾರ್ತಿ ಕೆರಿ ಹುಲ್ಮೆ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವೆಲ್ಲಿಂಗ್ಟನ್‌: ದಿ ಮ್ಯಾನ್‌ ಬೂಕರ್‌ ಪ್ರಶಸ್ತಿಗೆ ಪಾತ್ರರಾದ ನ್ಯೂಜಿಲೆಂಡ್‌ನ ಕಾದಂಬರಿಕಾರ್ತಿ ಕೆರಿ ಹುಲ್ಮೆ (74) ಸೌತ್‌ ಐಲ್ಯಾಂಡ್‌ನ ವೈಮೇಟ್‌ನಲ್ಲಿ ನಿಧನರಾದರು. 

ತಮ್ಮ ಮೊದಲ ಕಾದಂಬರಿ ‘ದಿ ಬೋನ್ ಪೀಪಲ್’ಗೆ 1984ರಲ್ಲಿ ಹುಲ್ಮೆ ಅವರು ಬೂಕರ್ ಪ್ರಶಸ್ತಿ ಪಡೆದಿದ್ದರು.

ತಂಬಾಕು ಎಲೆ ಆಯುವ ಕೆಲಸ ಮಾಡುತ್ತಿದ್ದ ಹುಲ್ಮ್‌ ಅವರು ಕಾನೂನು ಶಾಲೆಯನ್ನೂ ಅರ್ಧದಲ್ಲೇ ಬಿಟ್ಟವರು. ಸಮಾಜ ಸೇವೆಯಲ್ಲಿ ತೊಡಗಿದ್ದ ಅವರು ಬಳಿಕ ಕಾದಂಬರಿ ಬರೆಯಲು ತೊಡಗಿದ್ದರು. ಬೂಕರ್‌ ಪ್ರಶಸ್ತಿಗೆ ಪಾತ್ರವಾದ ಅವರ ಕೃತಿಯನ್ನು ಪ್ರಕಾಶನ ಮಾಡಲು ಹಲವು ಸಂಸ್ಥೆಗಳು ನಿರಾಕರಿಸಿದ್ದವು. ಮೊದಲ ಕೃತಿ ರಚಿಸಲು ಅವರು 20 ವರ್ಷ ತೆಗೆದುಕೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು