ಸಾವೊ ಪಾಲೊ: ಬ್ರೆಜಿಲ್‌ನ ಸಾವೊ ಪಾಲೊ ರಾಜ್ಯದ ಕರಾವಳಿಯಲ್ಲಿ ಉಂಟಾದ ಭೂಕುಸಿತ ಮತ್ತು ಪ್ರವಾಹದಿಂದಾಗಿ ಸಾವಿನ ಸಂಖ್ಯೆ 44 ಕ್ಕೆ ಏರಿದೆ. ಸುಮಾರು 40 ಜನರು ನಾಪತ್ತೆಯಾಗಿದ್ದಾರೆ ಎಂದು ಇಲ್ಲಿನ ಸರ್ಕಾರ ತಿಳಿಸಿದೆ.
ಬ್ರೆಜಿಲ್ ಸರ್ಕಾರ ಅಧಿಕೃತ ಹೇಳಿಕೆಯ ಪ್ರಕಾರ, ಸಾವೊ ಸೆಬಾಸ್ಟಿಯಾವೊ ನಗರದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಹಾಗೂ ಭೂಕುಸಿತದಲ್ಲಿ 43 ಜನರು ಮತ್ತು ಉಬಾಟುಬಾದ ಕಡಲತೀರದ ರೆಸಾರ್ಟ್‌ನಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಮನೆಗಳನ್ನು ಕಳೆದುಕೊಂಡ ಸುಮಾರು 2,400ಕ್ಕೂ ಹೆಚ್ಚು ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ.
ಭೂಕುಸಿತದಿಂದಾಗಿ ಇಲ್ಲಿನ ಹಲವು ರಸ್ತೆಗಳು ಮತ್ತು ಕಡಲತೀರದ ರೆಸಾರ್ಟ್‌ಗಳಿಗೆ ಹೋಗುವ ಹೆದ್ದಾರಿಗಳು ಹಾನಿಗೆ ಒಳಗಾಗಿದ್ದು, ಇದರಿಂದಾಗಿ ಅನೇಕ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಾವೊ ಸೆಬಾಸ್ಟಿಯಾವೊ, ಉಬಾಟುಬಾ, ಗೌರುಜಾ, ಬರ್ಟಿಯೊಗಾ, ಇಲ್ಹಬೆಲಾ ಮತ್ತು ಕ್ಯಾರಗ್ವಾಟಟುಬಾ ನಗರಗಳು ಹೆಚ್ಚು ಹಾನಿಗೆ ಒಳಾಗಿದ್ದು, ವಿಪತ್ತಿನ ಸ್ಥಿತಿ ಕಂಡು ಬರುತ್ತಿದೆ.
ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು, ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಹಾಗೂ ಮನೆ ಕಳೆದುಕೊಂಡ ಸ್ಥಳೀಯರಿಗೆ ವಸತಿ ನಿರ್ಮಾಣಕ್ಕಾಗಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.