ಗುರುವಾರ , ಮೇ 13, 2021
16 °C

ಕೋವಿಡ್: ಭಾರತದಿಂದ ಹೆಚ್ಚುವರಿ ವಿಮಾನಗಳ ಮನವಿ ತಿರಸ್ಕರಿಸಿದ ಹೀಥ್ರೂ ಏರ್‌ಪೋರ್ಟ್

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳಿರುವ ದೇಶಗಳ ‘ಕೆಂಪು ಪಟ್ಟಿಗೆ’ ಭಾರತವನ್ನು ಸೇರಿಸಿರುವ ಬ್ರಿಟನ್ ದೇಶವು ಹೆಚ್ಚುವರಿ ವಿಮಾನ ಸಂಚಾರ ಮನವಿಯನ್ನು ತಿರಸ್ಕರಿಸಿದೆ. ಭಾರತದಿಂದ ಹೆಚ್ಚುವರಿ ವಿಮಾನಗಳನ್ನು ಅನುಮತಿಸಲು ನಿರಾಕರಿಸಲಾಗಿದೆ ಎಂದು ಹೀಥ್ರೂ ಏರ್‌ಪೋರ್ಟ್ ತಿಳಿಸಿದೆ.

ಭಾರತದಲ್ಲಿ ಮೊದಲು ಗುರುತಿಸಲಾದ ಕೊರೊನಾ ವೈರಸ್ ರೂಪಾಂತರದ 100 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾದ ಬಳಿಕ ಬ್ರಿಟನ್ ಈ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್ ಹೇಳಿದ್ದರು.

‘ನಾವು ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಿರುವುದು ಕಠಿಣ ನಿರ್ಧಾರ. ಆದರೆ, ಇದು ಮಹತ್ವದ ನಿರ್ಧಾರವಾಗಿದೆ. ಇದರರ್ಥ ಯುಕೆ, ಐರಿಶ್ ನಿವಾಸಿ ಅಥವಾ ಬ್ರಿಟಿಷ್ ಪ್ರಜೆಯಲ್ಲದವರು ಹಿಂದಿನ 10 ದಿನಗಳಲ್ಲಿ ಭಾರತದಲ್ಲಿದ್ದರೆ ಯುಕೆಗೆ ಪ್ರವೇಶಿಸಲು ಸಾಧ್ಯವಿಲ್ಲ,’ ಎಂದು ಹ್ಯಾನ್ಕಾಕ್ ಸಂಸತ್ತಿನಲ್ಲಿ ತಿಳಿಸಿದ್ದರು.

ಭಾರತದಿಂದ ಹೆಚ್ಚುವರಿ ವಿಮಾನಗಳನ್ನು ಅನುಮತಿಸಲು ಹೀಥ್ರೂ ವಿಮಾನ ನಿಲ್ದಾಣವು ನಿರಾಕರಿಸಿದೆ ಎಂದು ಬಿಬಿಸಿ ಈ ಹಿಂದೆ ವರದಿ ಮಾಡಿತ್ತು, ಪಾಸ್‌ಪೋರ್ಟ್ ನಿಯಂತ್ರಣದಲ್ಲಿ ಸರತಿ ಸಾಲುಗಳ ಬಗ್ಗೆ ಇರುವ ಆತಂಕದಿಂದಾಗಿ ವಿಮಾನಯಾನ ಸಂಸ್ಥೆಗಳ ಕೋರಿಕೆಗಳನ್ನು ತಿರಸ್ಕರಿಸಲಾಗಿದೆ ಎಂದು ವಿಮಾನ ನಿಲ್ದಾಣ ತಿಳಿಸಿದೆ.

ಮತ್ತಷ್ಟು ಪ್ರಯಾಣಿಕರ ಆಗಮನಕ್ಕೆ ಅವಕಾಶ ನೀಡುವ ಮೂಲಕ ಅಸ್ತಿತ್ವದಲ್ಲಿರುವ ಒತ್ತಡಗಳನ್ನು ಹೆಚ್ಚಿಸಲು ನಾವು ಬಯಸುವುದಿಲ್ಲ ಎಂದು ಹೀಥ್ರೂ ವಿಮಾನ ನಿಲ್ದಾಣದ ಅಧಿಕಾರಿಗಳು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು