ಶನಿವಾರ, ಜುಲೈ 24, 2021
27 °C

ಕ್ಯಾಲಿಫೋರ್ನಿಯಾ: ಲಾಕ್‌ಡೌನ್‌ ಸಂಪೂರ್ಣ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಯಾನ್ ಫ್ರಾನ್ಸಿಸ್ಕೋ (ಎಪಿ): ಕೋವಿಡ್‌ 19 ಸಾಂಕ್ರಾಮಿಕ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಈಗ ಸಂಪೂರ್ಣ ಲಾಕ್‌ ಡೌನ್‌ ತೆರವುಗೊಳಿಸಲಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಲಾಕ್‌ಡೌನ್‌ ತೆರವುಗೊಳಿಸಿದ ಅಮೆರಿಕದ ಮೊದಲ ರಾಜ್ಯ ಎನಿಸಿಕೊಂಡಿದೆ.

ಹೆಚ್ಚಿನ ರಾಜ್ಯಗಳಲ್ಲಿ ಮಂಗಳವಾರದಿಂದಲೇ ರೆಸ್ಟೋರೆಂಟ್‌, ಬಾರ್‌ಗಳು, ಸೂಪರ್‌ ಮಾರ್ಕೆಟ್‌ಗಳು, ಜಿಮ್ಸ್‌, ಕ್ರೀಡಾಂಗಣಗಳು ಹಾಗೂ ಉಳಿದ ಸ್ಥಳಗಳು ಸಾಮಾಜಿಕ ಅಂತರ ಕಾಪಾಡುವ ಮತ್ತು ಜನದಟ್ಟಣೆಗೆ ಮಿತಿ ವಿಧಿಸುವಂತಹ ನಿಯಮಗಳಿಂದ ಮುಕ್ತವಾಗಿವೆ. ಆದರೆ, ಜನರು ಮಾಸ್ಕ್‌ ಧರಿಸಿಕೊಂಡಿರುವುದು ಸಾಂಕ್ರಾಮಿಕದ ವಿರುದ್ಧದ ಹೋರಾಟದ ಸಂಕೇತವಾಗಿ ಕಾಣಿಸುತ್ತದೆ. ಇನ್ನು ಮುಂದೆ ಲಸಿಕೆ ಹಾಕಿಸಿಕೊಂಡವರಷ್ಟೇ ವ್ಯವಹಾರಗಳಲ್ಲಿ ಭಾಗವಹಿಸುವುದು ಕಡ್ಡಾಯ ಎನ್ನುವ ನಿಯಮವೂ ಇಲ್ಲವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು