ಸೋಮವಾರ, ಜೂನ್ 21, 2021
21 °C

ಕ್ಯಾಲಿಫೋರ್ನಿಯಾ: ಆತಂಕ ಮೂಡಿಸಿದ ಕಾಡ್ಗಿಚ್ಚು

ಎಪಿ Updated:

ಅಕ್ಷರ ಗಾತ್ರ : | |

Prajavani

ಸ್ಯಾನ್‌ಫ್ರಾನ್ಸಿಸ್ಕೊ: ಉತ್ತರ ಕ್ಯಾಲಿಪೋರ್ನಿಯಾದಲ್ಲಿ ಕೊರೊನಾ ಸೋಂಕಿನ ಜೊತೆಗೆ ಕಾಡ್ಗಿಚ್ಚು, ಹೊಗೆ, ತೀವ್ರ ಉಷ್ಣಾಂಶವು ಜನರಲ್ಲಿ ಆತಂಕ ಮೂಡಿಸಿದೆ. 

ಸ್ಯಾನ್ಫ್ರಾನ್ಸಿಸ್ಕೊದ ಕರಾವಳಿ ಪ್ರದೇಶದ ಹಲವೆಡೆ ಬುಧವಾರ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಇದರಿಂದ ನಗರದೆಲ್ಲೆಡೆ ಹೊಗೆ, ಬೂದಿ ಆವರಿಸಿದೆ. ಹಾಗಾಗಿ ಅಶುದ್ಧ ಗಾಳಿಯಿಂದ ಜನರಲ್ಲಿ ಉಸಿರಾಟ ಸಂಬಂಧಿತ ಕಾಯಿಲೆಗಳು ಎದುರಾಗಬಹುದು ಎಂದು ಹೇಳಲಾಗಿದೆ.

ವಾಯು ಮಾಲಿನ್ಯ ಕಡಿಮೆಯಾಗುವ ತನಕ ಜನರು ಮನೆಯ ಕಿಟಿಕಿ, ಬಾಗಿಲುಗಳನ್ನು ಮುಚ್ಚಿ, ಮನೆಯೊಳಗೆ ಸುರಕ್ಷಿತವಾಗಿ ಇರುವಂತೆ ಜಿಲ್ಲಾ ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ.

ಇನ್ನೂ ಸ್ಯಾನ್‌ಫ್ರಾನ್ಸಿಸ್ಕೊದ ಕೆಲ ಪ್ರದೇಶಗಳಲ್ಲಿ ಗುರುವಾರ ಅಶುದ್ಧ ಗಾಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಜನಜಂಗುಳಿ ಇರುವ ಕರಾವಳಿ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕ ದ್ವಿಗುಣವಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು