ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳ: ವಿಶ್ವಸಂಸ್ಥೆ

Last Updated 10 ಜೂನ್ 2021, 7:58 IST
ಅಕ್ಷರ ಗಾತ್ರ

ಜಿನಿವಾ: ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ವಿಶ್ವದಲ್ಲಿ ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಕೋವಿಡ್‌–19ನಿಂದಾಗಿ ಎಲ್ಲ ದೇಶಗಳು ಸಂಕಷ್ಟಕ್ಕೀಡಾಗಿರುವುದರಿಂದ ಇನ್ನೂ ಲಕ್ಷಾಂತರ ಬಾಲಕರು ದುಡಿಮೆಯಲ್ಲಿ ತೊಡಗಬೇಕಾದ ಅಪಾಯವನ್ನು ಎದುರಿಸುವಂತಾಗಿದೆ ಎಂದು ವಿಶ್ವಸಂಸ್ಥೆ ಗುರುವಾರ ಹೇಳಿದೆ.

ವಿಶ್ವಸಂಸ್ಥೆಯ ಅಂಗಸಂಸ್ಥೆಗಳಾದ ಅಂತರರಾಷ್ಟ್ರೀಯ ಕಾರ್ಮಿಕರ ಸಂಘಟನೆ (ಐಎಲ್‌ಒ) ಹಾಗೂ ಯುನಿಸೆಫ್‌ ಈ ಸಂಬಂಧ ಜಂಟಿ ವರದಿಯೊಂದನ್ನು ಬಿಡುಗಡೆ ಮಾಡಿವೆ.

2020ರ ಆರಂಭದಲ್ಲಿ ವಿಶ್ವದಲ್ಲಿ ಒಟ್ಟು ಬಾಲಕಾರ್ಮಿಕರ ಸಂಖ್ಯೆ 16 ಕೋಟಿ ಇತ್ತು. 2016ರಿಂದ 2020ರ ಅವಧಿಯಲ್ಲಿ ಬಾಲಕಾರ್ಮಿಕರ ಸಂಖ್ಯೆಯಲ್ಲಿ 84 ಲಕ್ಷ ಹೆಚ್ಚಳ ಕಂಡುಬಂದಿದೆ ಎಂದು ಈ ವರದಿಯಲ್ಲಿ ವಿವರಿಸಲಾಗಿದೆ.

2000ದಿಂದ 2016ರ ನಡುವಿನ ಅವಧಿಯಲ್ಲಿ ಬಾಲಕಾರ್ಮಿಕರ ಸಂಖ್ಯೆಯಲ್ಲಿ 9.4 ಕೋಟಿಯಷ್ಟು ಇಳಿಕೆ ಕಂಡುಬಂದಿತ್ತು. ಆದರೆ, ನಂತರದ ಅವಧಿಯಲ್ಲಿ ಈ ಪ್ರವೃತ್ತಿ ತಿರುಗುಮುರುಗು ಆಗಿರುವುದನ್ನು ಕಾಣಬಹುದು ಎಂದೂ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಕೋವಿಡ್‌–19 ಪಿಡುಗಿನಿಂದಾಗಿ ಬಡತನ ಹೆಚ್ಚಾಗಲಿದ್ದು, ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೀಡಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಈ ಕುರಿತು ತುರ್ತು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಅಂದಾಜು 5 ಕೋಟಿ ಮಕ್ಕಳು ತಮ್ಮ ಬಾಲ್ಯ–ಶಿಕ್ಷಣದಿಂದ ವಂಚಿತರಾಗಿ, ದುಡಿಯಲು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT