ಸೋಮವಾರ, ಡಿಸೆಂಬರ್ 5, 2022
19 °C

ಚೀನಾ: ಕೋವಿಡ್‌ನಿಂದ 80 ವರ್ಷದ ವ್ಯಕ್ತಿ ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಚೀನಾದ ರಾಜಧಾನಿಯಲ್ಲಿ ಕೋವಿಡ್‌ನಿಂದ 87 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸೋಂಕು ತಡೆಗೆ ಕಠಿಣ ಕ್ರಮ ಜಾರಿಗೊಳಿಸಿದ ಆರು ತಿಂಗಳ ನಂತರ ವರದಿಯಾದ ಮೊದಲ ಪ್ರಕರಣ ಇದಾಗಿದೆ.

ಈ ಹಿಂದೆ ಮೇ 27ರಲ್ಲಿ ಶಾಂಘೈನಲ್ಲಿ ಕೋವಿಡ್‌ನಿಂದ ಸಾವು ಸಂಭವಿಸಿತ್ತು. ಹೊಸ ಪ್ರಕರಣದೊಂದಿಗೆ ಮೃತರ ಸಂಖ್ಯೆ 5,227ಕ್ಕೆ ಏರಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗವು ಹೇಳಿಕೆ ನೀಡಿದೆ.

ದೇಶದಲ್ಲಿ ಶೇ 92ರಷ್ಟು ಜನರಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿದ್ದು, 80 ವರ್ಷ ಮೀರಿದವರಲ್ಲಿ ಲಸಿಕೆ ಪಡೆದವರು ಕಡಿಮೆ ಎಂದೂ ತಿಳಿಸಿದೆ. ಈಗ ಮೃತಪಟ್ಟವರು ಲಸಿಕೆ ಪಡೆದಿದ್ದರೆ ಎಂಬುದರ ವಿವರ ನೀಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು