ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಇದೀಗ ಅಮೆರಿಕವನ್ನು ಗೌರವಿಸುವುದಿಲ್ಲ: ಡೊನಾಲ್ಡ್ ಟ್ರಂಪ್

Last Updated 9 ನವೆಂಬರ್ 2021, 16:41 IST
ಅಕ್ಷರ ಗಾತ್ರ

ವಾಷಿಂಗ್ಟನ್: ಜೋ ಬೈಡನ್ ಆಡಳಿತವು ಪರಿಣಾಮಕಾರಿಯಾಗಿಲ್ಲ ಮತ್ತು ಚೀನಾ ಈಗ ಅಮೆರಿಕವನ್ನು ಗೌರವಿಸುವುದಿಲ್ಲ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕಅಧ್ಯಕ್ಷ ಬೈಡನ್ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರೊಂದಿಗೆಸೆಪ್ಟೆಂಬರ್‌ನಲ್ಲಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಉಭಯ ದೇಶಗಳ ನಡುವಿನ ಸ್ಪರ್ಧೆಯು ಸಂಘರ್ಷಕ್ಕೆ ತಿರುಗದಂತೆ ನೋಡಿಕೊಳ್ಳುವ ಸಲುವಾಗಿ ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಶ್ವೇತಭವನ ಸ್ಪಷ್ಟಪಡಿಸಿರುವುದಾಗಿ ಫಾಕ್ಸ್‌ ನ್ಯೂಸ್ ವರದಿ ಮಾಡಿದೆ.

ಆದಾಗ್ಯೂ, ಬೈಡನ್ ಆಡಳಿತ ಪರಿಣಾಮಕಾರಿಯಾಗಿಲ್ಲ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

‘ಇದು (ಮಾತುಕತೆ ನಡೆಸಿರುವುದು)ಚೀನಾದೆದುರು ಅಭಿಪ್ರಾಯ ವ್ಯಕ್ತಪಡಿಸುವ ಸರಿಯಾದ ಮಾರ್ಗವೆಂದು ನನಗನಿಸುತ್ತಿಲ್ಲ. ಇದು ನಮ್ಮ ದೌರ್ಬಲ್ಯವನ್ನು ತೋರುತ್ತದೆ‘ ಎಂದು ಟೀಕಿಸಿರುವುದಾಗಿ ಫಾಕ್ಸ್ ನ್ಯೂಸ್ ತಿಳಿಸಿದೆ.

‘ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಚೀನಾ ಈ ದೇಶವನ್ನು (ಅಮೆರಿಕವನ್ನು) ಗೌರವಿಸುತ್ತಿತ್ತು. ಈಗ ಚೀನಾ ನಮ್ಮ ದೇಶಕ್ಕೆ ಗೌರವ ನೀಡುವುದಿಲ್ಲ. ಇದು ಬೇಸರದ ಸಂಗತಿ‘ ಎಂದಿರುವುದಾಗಿಯೂ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT