ಬುಧವಾರ, ನವೆಂಬರ್ 25, 2020
18 °C

ಬೈಡನ್ ಆಯ್ಕೆಯಾದರೆ ಅಮೆರಿಕ-ಚೀನಾ ಬಾಂಧವ್ಯ ಸುಧಾರಿಸಬಹುದು: ಚೀನಾ ನಾಯಕರ ವಿಶ್ವಾಸ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಡೆಮಾಕ್ರಟಿಕ್ ಪಕ್ಷದ ‌ಜೊ ಬೈಡನ್ ಜಯಗಳಿಸಿದರೆ, ಚೀನಾ–ಅಮೆರಿಕ ನಡುವಿನ ವ್ಯಾಪಾರ, ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರದಲ್ಲಿನ ಸಂಘರ್ಷ ತುಸು ಕಡಿಮೆಯಾಗಬಹುದು ಎಂಬ ವಿಶ್ವಾಸವನ್ನು ಚೀನಾದ ನಾಯಕರು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಯಾವುದೇ ಬದಲಾವಣೆ ಚೀನಾದ ಬಗ್ಗೆ ಅಮೆರಿಕದ ರಾಜಕೀಯ ವಲಯದಲ್ಲಿ ಹತಾಶೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಅಮೆರಿಕದಲ್ಲಿರುವ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದ ಜನಪ್ರತಿನಿಧಿಗಳು ಮತ್ತು ಮತದಾರರು ಚೀನಾದೊಂದಿಗೆ ಮೃದುಧೋರಣೆ ಹೊಂದಲು ಇಷ್ಟವಿಲ್ಲವೆಂದು ತೋರುತ್ತದೆ. ಈ ಚುನಾವಣೆಯ ಫಲಿತಾಂಶವನ್ನು ಲೆಕ್ಕಿಸದೇ, ಉಭಯ ರಾಷ್ಟ್ರಗಳ ನಡುವೆ ಕಲಹಗಳು ಮುಂದುವರಿಯಬಹುದು ಎಂದು ಅಂದಾಜಿಸಲಾಗುತ್ತಿದೆ.

ಕೊರೊನಾ ಸಾಂಕ್ರಾಮಿಕ ರೋಗದ ನಡುವೆಯೂ ತಂತ್ರಜ್ಞಾನ, ವ್ಯಾಪಾರ, ರಕ್ಷಣೆ ಮತ್ತು ಬೇಹುಗಾರಿಕೆ ಕ್ಷೇತ್ರದಲ್ಲಿ ಅಮೆರಿಕ – ಚೀನಾ ನಡುವಿನ ಸಂಬಂಧಗಳು ಕೆಳಮಟ್ಟಕ್ಕೆ ಇಳಿದಿವೆ. ಹಲವು ಕ್ಷೇತ್ರಗಳಲ್ಲಿರುವ ಭಿನ್ನಾಭಿಪ್ರಾಯದ ಹೊರತಾಗಿಯೂ ಎರಡೂ ಪಕ್ಷಗಳು ಚೀನಾದೊಂದಿಗೆ ವ್ಯಾಪಾರ ಮತ್ತು ಹಾಂಗ್‌ಕಾಂಗ್‌, ತೈವಾನ್ ಜತೆಗಿನ ನಿಲುವು ಮತ್ತು ಕ್ಸಿಯಾಂಗ್‌ ಧಾರ್ಮಿಕ, ಜನಾಂಗೀಯ ಅಲ್ಪಸಂಖ್ಯಾತರ ಬಗೆಗಿನ ನಿಲುವನ್ನು ಟೀಕಿಸುತ್ತಿವೆ. ‌

’ಅಮೆರಿಕದ ಸಾರ್ವಜನಿಕರೂ ಚೀನಾದ ಬಗ್ಗೆ ಅಷ್ಟೇ ನಕಾರಾತ್ಮಕ ಧೋರಣೆ ಹೊಂದಿದ್ದಾರೆ’ ಎಂದು ಪ್ಯೂ ರಿಸರ್ಚ್ ಸೆಂಟರ್ ಮಾರ್ಚ್‌ ತಿಂಗಳಲ್ಲಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಆ ಸಮೀಕ್ಷೆಯಲ್ಲಿ ಮೂರನೇ ಎರಡರಷ್ಟು ಜನರು ಚೀನಾದ ಬಗ್ಗೆ ’ಪ್ರತಿಕೂಲವಾದ ಅಭಿಪ್ರಾಯಗಳನ್ನು’ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು