ಶನಿವಾರ, ಸೆಪ್ಟೆಂಬರ್ 25, 2021
23 °C

ಅನಿಲ ಹೊರಸೂಸುವಿಕೆ: ನಿಗದಿತ ಗಡುವಿನೊಳಗೆ ವರದಿ ಸಲ್ಲಿಸದ ಚೀನಾ, ಭಾರತ

ಎಪಿ Updated:

ಅಕ್ಷರ ಗಾತ್ರ : | |

Prajavani

ಬರ್ಲಿನ್‌: ಹಸಿರು ಮನೆ ಅನಿಲ ಹೊರಸೂಸುವಿಕೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ಹೊಸ ಯೋಜನೆಗಳ ಕುರಿತ ವರದಿಯನ್ನು ಚೀನಾ ಮತ್ತು ಭಾರತ ದೇಶಗಳು ನಿಗದಿತ ಗಡುವಿನೊಳಗೆ ಸಲ್ಲಿಸುವಲ್ಲಿ ವಿಫಲವಾಗಿವೆ ಎಂದು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಏಜೆನ್ಸಿ ತಿಳಿಸಿದೆ.

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಎರಡೂ ದೇಶಗಳು ಭೂಮಿಯ ತಾಪಮಾನ ಕಡಿಮೆಗೊಳಿಸುವುದಕ್ಕೆ ಪೂರಕವಾಗಿ ತಮ್ಮ ಪರಿಷ್ಕೃತ ಗುರಿಗಳನ್ನು ಸಲ್ಲಿಸುವಲ್ಲಿ ವಿಫಲವಾಗಿವೆ ಎಂದು ಅದು ಶನಿವಾರ ತಿಳಿಸಿದೆ.

ವಿಶ್ವದಲ್ಲಿ ಅತಿ ಹೆಚ್ಚು ಅನಿಲ ಹೊರಸೂಸುವಿಕೆ ಹೊಂದಿರುವ ದೇಶ ಚೀನಾ ಆಗಿದ್ದರೆ, ಅಮೆರಿಕ ಎರಡು ಮತ್ತು ಭಾರತ ಮೂರನೇ ಸ್ಥಾನದಲ್ಲಿದೆ. ‌ಅಮೆರಿಕ ಏಪ್ರಿಲ್‌ನಲ್ಲಿ ತನ್ನ ಹೊಸ ಗುರಿಯ ಯೋಜನೆಗಳ ವರದಿಯನ್ನು ಸಲ್ಲಿಸಿದೆ.

ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಸಂಸ್ಥೆಯ ಮುಖ್ಯಸ್ಥೆ ಪೆಟ್ರಿಸಿಯಾ ಎಸ್ಪಿನೋಸಾ ಅವರು, ವಿಶ್ವದ 110 ದೇಶಗಳು ನಿಗದಿತ ಗಡುವಿನೊಳಗೆ ತಮ್ಮ ಹೊಸ ಗುರಿಗಳನ್ನು ಸಲ್ಲಿಸಿವೆ ಎಂದಿದ್ದಾರೆ.

ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಸಿರಿಯಾ ಮತ್ತು 82 ಇತರ ರಾಷ್ಟ್ರಗಳು ಸಹ ವರದಿ ಸಲ್ಲಿಸುವಲ್ಲಿ ವಿಫಲವಾಗಿವೆ. ನವೆಂಬರ್‌ನಲ್ಲಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ ನಡೆಯಲಿದ್ದು, ಅದಕ್ಕೆ ಸಿದ್ಧತೆಗಳು ನಡೆಯುತ್ತಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು