ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ‘ಝಿಯುವಾನ್‌–1 02ಇ’ ಉಪಗ್ರಹ ಉಡಾವಣೆ

Last Updated 26 ಡಿಸೆಂಬರ್ 2021, 17:36 IST
ಅಕ್ಷರ ಗಾತ್ರ

ಬೀಜಿಂಗ್‌: ಐದು ಮೀಟರ್‌ ರೆಸಲ್ಯೂಶನ್‌ವುಳ್ಳ ಭೂಮಿಯಚಿತ್ರಗಳನ್ನು ತೆಗೆಯಬಲ್ಲ ಕ್ಯಾಮೆರಾವನ್ನು ಹೊಂದಿರುವ ಹೊಸ ಉಪಗ್ರಹವನ್ನುಚೀನಾವು ಭಾನುವಾರ ಉಡಾವಣೆ ಮಾಡಿದೆ ಎಂದು ಚೀನಾದ ರಾಷ್ಟ್ರೀಯ ಅಂತರಿಕ್ಷ ಆಡಳಿತ (ಸಿಎನ್‌ಸಿಎ) ಹೇಳಿದೆ.

ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿರುವ ತೈಯುವಾನ್‌ ಉಪಗ್ರಹ ಉಡಾವಣೆ ಕೇಂದ್ರದಿಂದಲಾಂಗ್‌ ಮಾರ್ಚ್‌–4ಸಿ ರಾಕೆಟ್‌ ಮೂಲಕ ‘ಝಿಯುವಾನ್‌–1 02ಇ’ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.

‘ಈ ಉಪಗ್ರಹವು 2.5 ಕಿ.ಗ್ರಾಂ ತೂಕವಿದ್ದು,ಇನ್‌ಫ್ರಾರೆಡ್‌, ನಿಯರ್‌–ಇನ್‌ಫ್ರಾರೆಡ್‌, ಹೈಪರ್‌ಸ್ಪೆಕ್ಟ್ರಲ್‌ ಕ್ಯಾಮೆರಾಗಳನ್ನು ಹೊಂದಿದೆ. ಈ ಕ್ಯಾಮೆರಾಗಳುಭೂಮಿಯ ಪೂರ್ಣ-ಬಣ್ಣದ ಪ್ಯಾಂಕ್ರೊಮ್ಯಾಟಿಕ್ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ಸಿಜಿಟಿಎನ್‌–ಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT