ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಕಮ್ಯುನಿಸ್ಟ್‌ ಪಾರ್ಟಿ ಸಂಸ್ಥಾಪನಾ ಶತಮಾನೋತ್ಸವಕ್ಕೆ ಭರದ ಸಿದ್ಧತೆ

Last Updated 23 ಜೂನ್ 2021, 10:48 IST
ಅಕ್ಷರ ಗಾತ್ರ

ಬೀಜಿಂಗ್‌: ‘ಚೀನಾ ಕಮ್ಯುನಿಸ್ಟ್‌ ಪಾರ್ಟಿ ಸ್ಥಾಪನೆಯ ಶತಮಾನೋತ್ಸವ ಆಚರಣೆಗೆ ಎಂಟು ದಿನಗಳ ಬಾಕಿ ಇರುವಂತೆ, ದೇಶದಾದ್ಯಂತ ಸಿದ್ಧತೆಗಳು ಆರಂಭವಾಗಿದ್ದು, ಅದರ ಭಾಗವಾಗಿ ಬೀಜಿಂಗ್‌ನ ‘ಟಿಯಾನನ್‌ಮೆನ್ ಚೌಕ' ಸೇರಿದಂತೆ ಪ್ರಮುಖ ತಾಣಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ.

ಪ್ರವಾಸಿಗರ ಪ್ರಮುಖ ಆಕರ್ಷಣೆಯ ತಾಣವಾಗಿರುವ ಈ ಟಿಯಾನನ್‌ಮೆನ್‌ ಸ್ಕ್ವೇರ್‌ಗೆ ಬುಧವಾರದಿಂದ ಜುಲೈ 2 ರವರೆಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ವೃತ್ತದ ಸಮೀಪಚೀನಾ ಕಮ್ಯುನಿಸ್ಟ್‌ ಪಾರ್ಟಿಯ ಸಂಸ್ಥಾಪಕ ಮಾವೊ ಅವರ ಸ್ಮಾರಕ ಇದೆ. ಪಕ್ಕದಲ್ಲಿರುವ ಬಯಲು ರಂಗಮಂದಿರದಲ್ಲಿ ಸಾಲು ಸಾಲು ಹಳದಿ ಆಸನಗಳನ್ನು ಜೋಡಿಸಲಾಗಿದೆ. ದೊಡ್ಡ ಪ್ರಮಾಣದ ಯಂತ್ರಗಳು ಬಂದು ನಿಂತಿವೆ. ನಗರದ ವಿವಿಧೆಡೆ ಶತಮಾನೋತ್ಸವ ಸಮಾರಂಭಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.

ಶತಮಾನೋತ್ಸವದ ಅಂಗವಾಗಿ ಕಮ್ಯುನಿಸ್ಟ್ ಆಡಳಿತದ ಆರಂಭಿಕ ವರ್ಷಗಳಲ್ಲಿ ದೇಶದಲ್ಲಿ ನಡೆದ ಯುದ್ಧ, ರಾಜಕೀಯ ಅಭಿಯಾನಗಳು, ಮಾರುಕಟ್ಟೆ ಸುಧಾರಣೆ, ಅದರಿಂದ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿ ಹೊರ ಹೊಮ್ಮಿದ್ದು.. ಇಂಥ ಹಲವು ಬೆಳವಣಿಗಳ ಕುರಿತು ಪ್ರದರ್ಶನ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT