ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನಕ್ಕೆ ಚೀನಾದಿಂದ ಮತ್ತೆ 20 ಲಕ್ಷ ಕೋವಿಡ್‌ ಲಸಿಕೆ

Last Updated 23 ಜೂನ್ 2021, 10:22 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನವು ಚೀನಾದಿಂದ ಹೆಚ್ಚುವರಿಯಾಗಿ 20 ಲಕ್ಷ ಕೋವಿಡ್‌ ಲಸಿಕೆಯನ್ನು ಪಡೆದಿದೆ.

ಪಾಕಿಸ್ತಾನದ ಅಂತರರಾಷ್ಟ್ರೀಯ ಏರ್‌ಲೈನ್‌ನ(ಪಿಐಎ) ಪಿಕೆ–6852 ವಿಶೇಷ ವಿಮಾನವು ಬೀಜಿಂಗ್‌ನಿಂದ 20 ಲಕ್ಷ ಸಿನೋವಾಕ್ ಕೋವಿಡ್‌ ಲಸಿಕೆಯನ್ನು ಮಂಗಳವಾರ ಏರ್‌ಲಿಫ್ಟ್‌ ಮಾಡಿದೆ.

ಪಾಕಿಸ್ತಾನವು ಭಾನುವಾರವಷ್ಟೇ ಚೀನಾದಿಂದ 15.5 ಲಕ್ಷ ಸಿನೋವಾಕ್‌ ಲಸಿಕೆಯನ್ನು ಪಡೆದಿತ್ತು. ಇದೀಗ ಮತ್ತೆ ಹೆಚ್ಚುವರಿಯಾಗಿ 20 ಲಕ್ಷ ಲಸಿಕೆಯು ಚೀನಾದಿಂದ ಬಂದಿದೆ.

‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಎನ್‌ಸಿಒಸಿ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಲಸಿಕೆಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಮುನ್ನಡೆಸುತ್ತಿದೆ’ ಎಂದು ನ್ಯಾಷನಲ್ ಕಮಾಂಡ್ ಅಂಡ್ ಆಪರೇಷನ್ ಸೆಂಟರ್ (ಎನ್‌ಸಿಒಸಿ) ಹೇಳಿದೆ.

‘ಪಾಕಿಸ್ತಾನದಲ್ಲಿ ಬುಧವಾರ 930 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 9,50,768ಕ್ಕೆ ಏರಿಕೆಯಾಗಿದೆ. ಬುಧವಾರ 39 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ದೇಶದಲ್ಲಿ ಈವರೆಗೆ 22,073 ಜನರು ಸೋಂಕಿನಿಂದ ಸಾವಿಗೀಡಾಗಿದ್ದಾರೆ’ ಎಂದು ರಾಷ್ಟ್ರೀಯ ಆರೋಗ್ಯ ಸೇವೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT