ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಮತ್ತೆ ಸ್ಫೋಟಿಸಿದ ಕೋವಿಡ್ ಪ್ರಕರಣ

Last Updated 7 ನವೆಂಬರ್ 2022, 14:36 IST
ಅಕ್ಷರ ಗಾತ್ರ

ಬೀಜಿಂಗ್ : ಚೀನಾದಲ್ಲಿ ಕಠಿಣ ಕೋವಿಡ್‌ ನಿರ್ಬಂಧಗಳಿದ್ದರೂ, ಸೋಮವಾರ ಒಂದೇ ದಿನ 5,600 ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ ಆರು ತಿಂಗಳಲ್ಲಿ ದಾಖಲಾದ ಗರಿಷ್ಠ ಪ್ರಕರಣವಾಗಿದೆ.

ಬೀಜಿಂಗ್‌ನಲ್ಲಿ ವಾರಾಂತ್ಯದಲ್ಲಿ ಕೋವಿಡ್‌ ನಿರ್ಬಂಧಗಳನ್ನು ಹಾಕಲಾಗಿದ್ದು. ಕ್ವಾರಂಟೈನ್‌ ಪ್ರದೇಶಗಳು ಹಾಗೂ ಕೆಲಸದ ಜಾಗಗಳಲ್ಲಿ ಸಾಮೂಹಿಕ ಕೋವಿಡ್‌ ಪರೀಕ್ಷೆಗಳನ್ನು ನಡೆಯುತ್ತಿದ್ದರೂ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ.

ಕೈಗಾರಿಕೆಗಳು ದೊಡ್ಡ ಸಂಖ್ಯೆಯಲ್ಲಿರುವ ಗ್ವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿವೆ.ಬೀಜಿಂಗ್‌ನಲ್ಲಿ ಸಹ ಕೊವೀಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅನೇಕ ಶಾಲೆಗಳನ್ನು ಮುಚ್ಚಲಾಗಿದೆ. ಜೊತೆಗೆ ಅನೇಕ ಕಂಪನಿಗಳು ತಾತ್ಕಾಲಿಕವಾಗಿ ಮನೆಯಿಂದ ಕೆಲಸ ಮಾಡಲು ಸೂಚನೆ ನೀಡಿವೆ.

ಝೆಂಗ್‌ಜೌನಲ್ಲಿರುವ ವಿಶ್ವದ ಅತಿದೊಡ್ಡ ಐಫೋನ್ ತಯಾರಿಕಾ ಘಟಕಕ್ಕೂ ಕೋವಿಡ್‌ ಬಿಸಿ ತಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT