ಚಂದ್ರನಿಂದ ಭೂಮಿಯತ್ತ ಚೀನಾದ ಚಾಂಗ್‌ಇ

ಬೀಜಿಂಗ್: ಚಂದ್ರನ ಮೇಲ್ಮೈಯಿಂದ ಕಲ್ಲು ಹಾಗೂ ಮಣ್ಣಿನ ಮಾದರಿಯನ್ನು ಸಂಗ್ರಹಿಸಿರುವ ಚೀನಾದ ಚಾಂಗ್‌ಇ–5 ಪ್ರೋಬ್, ಸೋಮವಾರ ಭೂಮಿಯತ್ತ ಮುಖಮಾಡಿದೆ.
45 ವರ್ಷಗಳ ಬಳಿಕ ಚಂದ್ರನ ಮೇಲ್ಮೈಯಿಂದ ಚಾಂಗ್‌ಇ ಪ್ರೋಬ್ ಮಾದರಿಗಳನ್ನು ಸಂಗ್ರಹಿಸಿದೆ. ಸೋಮವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 11.13ರ ವೇಳೆಗೆ ಪ್ರೋಬ್‌ನಲ್ಲಿರುವ ಎರಡು ಇಂಜಿನ್‌ಗಳನ್ನು 28 ಸೆಕೆಂಡ್ ಉರಿಸಲಾಗಿದೆ. ಈ ಮೂಲಕ ಭೂಮಿಗೆ ಹಿಂದಿರುಗುವ ಪಥಕ್ಕೆ ಚಾಂಗ್‌ಇ ಪ್ರೋಬ್ ಅನ್ನು ಪ್ರವೇಶಿಸುವ ಕಾರ್ಯ ಆರಂಭವಾಗಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತವು(ಸಿಎನ್‌ಎಸ್‌ಎ) ತಿಳಿಸಿದೆ.
ನ.24ರಂದು ಚಾಂಗ್‌ಇ ಉಡಾವಣೆಗೊಳಿಸಲಾಗಿತ್ತು. ಡಿ.1ರಂದು ಚಂದ್ರನ ಮೇಲ್ಮೈನಲ್ಲಿ ಇಳಿದಿದ್ದ ಪ್ರೋಬ್, ಮಾದರಿಗಳನ್ನು ಸಂಗ್ರಹಿಸಿ ಡಿ.3ರಂದು ಚಂದ್ರನ ಮೇಲ್ಮೈಯಿಂದ ಉಡಾವಣೆಗೊಂಡಿತ್ತು. ಡಿಸೆಂಬರ್ ಕೊನೆಯ ವಾರದಲ್ಲಿ ಉತ್ತರ ಚೀನಾದ ಮಂಗೋಲಿಯಾದಲ್ಲಿ ಇಳಿಯುವ ನಿರೀಕ್ಷೆ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.