ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಚೀನಾದ ಲಾಂಗ್‌ ಮಾರ್ಕ್‌–8

Last Updated 22 ಡಿಸೆಂಬರ್ 2020, 11:34 IST
ಅಕ್ಷರ ಗಾತ್ರ

ಬೀಜಿಂಗ್‌: ಲಾಂಗ್‌ ಮಾರ್ಕ್‌–8 ಹೆಸರಿನ ಚೀನಾದ ನೂತನ ರಾಕೆಟ್‌, ತನ್ನ ಮೊದಲನೇ ಹಾರಾಟದಲ್ಲೇ ಐದು ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆಯು ತಿಳಿಸಿದೆ.

ಹೈನಾನ್‌ನಲ್ಲಿರುವ ವೆಂಚಾಂಗ್‌ ಉಡಾವಣಾ ಕೇಂದ್ರದಿಂದ ರಾಕೆಟ್‌ ಉಡಾವಣೆಗೊಂಡಿತು. 50.3 ಮೀ. ಎತ್ತರವಿರುವ ಈ ರಾಕೆಟ್‌, 4.5 ಟನ್‌ ತೂಕದ ಉಪಗ್ರಹಗಳನ್ನು 700ಕಿ.ಮೀ ಎತ್ತರದಲ್ಲಿರುವ ಕಕ್ಷೆಗೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಬಾಹ್ಯಾಕಾಶ ವಿಜ್ಞಾನ, ರಿಮೋಟ್‌ ಸೆನ್ಸಿಂಗ್‌, ಸಂವಹನ ತಂತ್ರಜ್ಞಾನ ಕುರಿತು ಈ ಐದು ಪ್ರಾಯೋಗಿಕ ಉಪಗ್ರಹಗಳು ಕಾರ್ಯನಿರ್ವಹಿಸಲಿವೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯು(ಸಿಎನ್‌ಎಸ್‌ಎ) ತಿಳಿಸಿದೆ.

ಚೀನಾ ಅಕಾಡೆಮಿ ಆಫ್‌ ಲಾಂಚ್‌ ವೆಹಿಕಲ್‌ ಟೆಕ್ನಾಲಜಿ(ಸಿಎಎಲ್‌ಟಿ) ಅಭಿವೃದ್ಧಿಪಡಿಸಿರುವ ಈ ಲಾಂಗ್‌ ಮಾರ್ಕ್‌–8, ಚೀನಾದ ರಾಕೆಟ್‌ ಉಡಾವಣಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಒಂದು ಅಥವಾ ಒಂದಕ್ಕಿಂತ ಹೆಚ್ಚು ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ರಾಕೆಟ್‌ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT