ಗುರುವಾರ , ಜನವರಿ 21, 2021
29 °C

ಬೈಡನ್‌ಗೆ ಅಭಿನಂದಿಸಿದ ಷಿ ಜಿನ್‌ಪಿಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್‌ಗೆ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಬುಧವಾರ ಅಭಿನಂದನೆ ಸಲ್ಲಿಸಿದ್ದಾರೆ.

‘ಚೀನಾ ಮತ್ತು ಅಮೆರಿಕದ ಸಂಬಂಧದ ಆರೋಗ್ಯಕರ ಹಾಗೂ ಸ್ಥಿರ ಅಭಿವೃದ್ಧಿಯು, ಎರಡೂ ರಾಷ್ಟ್ರಗಳ ಜನರ ಮೂಲಭೂತ ಹಿತಾಸಕ್ತಿಯನ್ನು ಕಾಪಾಡಲಿದ್ದು, ಜೊತೆಗೆ ಅಂತರರಾಷ್ಟ್ರೀಯ ಸಮುದಾಯದ ಸರ್ವಸಮಾನವಾದ ನಿರೀಕ್ಷೆಯನ್ನೂ ಈಡೇರಿಸಲಿದೆ’ ಎಂದು ಷಿ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

‘ಎರಡೂ ರಾಷ್ಟ್ರಗಳ ನಡುವಿನ ಸಮನ್ವಯದ ವೃದ್ಧಿ, ಪರಸ್ಪರ ಗೌರವ, ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವ ಮನೋಭಾವವನ್ನು ಎರಡೂ ರಾಷ್ಟ್ರಗಳು ಎತ್ತಿಹಿಡಿಯಲಿದೆ. ಶಾಂತಿ ಹಾಗೂ ಅಭಿವೃದ್ಧಿಗಾಗಿ ಎರಡೂ ರಾಷ್ಟ್ರಗಳು ಇತರೆ ರಾಷ್ಟ್ರಗಳೊಂದಿಗೆ ಕೈಜೋಡಿಸಲಿದೆ ಎಂದು ನಂಬಿದ್ದೇನೆ’ ಎಂದು ಷಿ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.    

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು