ಸೋಮವಾರ, ಜುಲೈ 4, 2022
23 °C

ತೈವಾನ್ ಮೇಲೆ ಚೀನಾ ಒತ್ತಡ: ಅಮೆರಿಕ ಕಳವಳ

ಪಿಟಿಐ Updated:

ಅಕ್ಷರ ಗಾತ್ರ : | |

ಅಮೆರಿಕ ಧ್ವಜ

ವಾಷಿಂಗ್ಟನ್: ತೈವಾನ್‌ ಮೇಲೆ ಚೀನಾ ತನ್ನ ಸೇನೆಯ ಮೂಲಕ ಒತ್ತಡ ಹೇರುತ್ತಿದೆ ಎಂದು ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಇಂಥ ಪ್ರಯತ್ನಗಳು ಪ್ರಾದೇಶಿಕ ಮಟ್ಟದಲ್ಲಿ ಶಾಂತಿ ಕದಡಲು ಮತ್ತು ಸ್ಥಿರತೆಗೆ ಧಕ್ಕೆ ಉಂಟು ಮಾಡುತ್ತವೆ ಎಂದು ಅದು ಹೇಳಿದೆ.

ತೈವಾನ್ ಸೇರಿದಂತೆ ನೆರೆಹೊರೆ ದೇಶಗಳ ಮೇಲೆ ಒತ್ತಡ ತಂತ್ರ ಹೇರುವ ಪಿಆರ್‌ಸಿ (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) ಧೋರಣೆ ಮತ್ತು ಯತ್ನವನ್ನು ಅತಂಕದಿಂದಲೇ ಗಮನಿಸಲಾಗುತ್ತಿದೆ ಎಂದು ಅಮೆರಿಕ ತಿಳಿಸಿದೆ.

ಈ ಕುರಿತು ನೀಡಿರುವ ಹೇಳಿಕೆಯಲ್ಲಿ ತೈವಾನ್‌ ಮೇಲೆ ಸೇನೆ, ರಾಜತಾಂತ್ರಿಕ ಮತ್ತು ಅರ್ಥಿಕವಾಗಿ ಒತ್ತಡ ಹೇರುವುದರಿಂದ ಚೀನಾ ಹಿಂದೆ ಸರಿಯಬೇಕು. ಬದಲಾಗಿ ಅರ್ಥಪೂರ್ಣ ಮಾತುಕತೆಗೆ ಮುಂದಾಗಬೇಕು ಎಂದು ಸಲಹೆ ಮಾಡಿದೆ.

ಉಭಯ ದೇಶಗಳ ನಡುವಣ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಲು ಅಮೆರಿಕ ಒತ್ತು ನೀಡಲಿದೆ. ತೈವಾನ್‌ ಜನರ ಹಿತದೃಷ್ಟಿಯಿಂದ ಇದು ಅಗತ್ಯ. ತೈವಾನ್‌ ಬಾಂಧವ್ಯ ಕಾಯ್ದೆ, ಈ ಕುರಿತು ನೀಡಲಾದ ಆರು ಭರವಸೆಗಳಿಗೆ ಅಮೆರಿಕ ಬದ್ಧವಾಗಿದೆ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು