ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಈಜಿಪ್ಟ್‌ ಪಾಲುದಾರಿಕೆ ಐತಿಹಾಸಿಕ ಎತ್ತರಕ್ಕೆ: ರಾಜನಾಥ್‌ ಸಿಂಗ್‌

Last Updated 21 ಸೆಪ್ಟೆಂಬರ್ 2022, 12:52 IST
ಅಕ್ಷರ ಗಾತ್ರ

ಕೈರೊ: ‘ರಕ್ಷಣಾ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರ ವೃದ್ಧಿ ಕುರಿತು ಮಾಡಿಕೊಂಡಿರುವ ಒಡಂಬಡಿಕೆಯು ಭಾರತ ಮತ್ತು ಈಜಿಪ್ಟ್‌ ನಡುವಣ ಪಾಲುದಾರಿಕೆಯನ್ನು ಐತಿಹಾಸಿಕ ಎತ್ತರಕ್ಕೆ ಕೊಂಡೊಯ್ಯಲಿದೆ’ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಮೂರು ದಿನಗಳ ಈಜಿಪ್ಟ್‌ ಪ್ರವಾಸ ಮುಕ್ತಾಯಗೊಂಡ ಬಳಿಕ ಬುಧವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಈಜಿಪ್ಟ್‌ ಭೇಟಿಯು ಅತ್ಯಂತ ಫಲಪ್ರದವಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.‌

ಈಜಿಪ್ಟ್‌ ಭೇಟಿ ವೇಳೆ ರಾಜನಾಥ್‌ ಅವರು ಸಿಬ್ಬಂದಿ ಮತ್ತು ತರಬೇತಿಗೆ ಸಹಕಾರ ನೀಡುವ ಹಾಗೂ ಕಾಲಮಿತಿಯಲ್ಲಿ ರಕ್ಷಣಾ ಕ್ಷೇತ್ರದ ಉದ್ಯಮಗಳ ಜೊತೆಗೆ ಪರಸ್ಪರ ಸಹಕಾರ ವೃದ್ಧಿ ಸಾಧ್ಯತೆಗಳ ಬಗ್ಗೆ ಈಜಿಪ್ಟ್‌ನ ಜನರಲ್‌ ಮೊಹಮ್ಮದ್‌ ಝಕಿ ಜೊತೆ ಚರ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT