ಭಾನುವಾರ, ಏಪ್ರಿಲ್ 11, 2021
28 °C

ಕೋವಿಡ್‌ ಪ್ಯಾಕೇಜ್‌ ಮಸೂದೆಯಿಂದ ಕನಿಷ್ಠ ವೇತನ ಹೆಚ್ಚಳ ಕೈಬಿಟ್ಟ ಸೆನೆಟ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಕೋವಿಡ್‌ ಹಿನ್ನೆಲೆಯಲ್ಲಿ ಕನಿಷ್ಠ ವೇತನ ಹೆಚ್ಚಳ ಮಾಡಬೇಕು ಎಂಬ ಡೆಮಾಕ್ರಟಿಕ್‌ ಸಂಸದರ ಪ್ರಯತ್ನಕ್ಕೆ ಸೆನೆಟ್‌ನಲ್ಲಿ ತೀವ್ರ ಹಿನ್ನಡೆಯಾಗಿದೆ.

ಕೋವಿಡ್‌–19 ಹಿನ್ನೆಲೆಯಲ್ಲಿ ಅಮೆರಿಕದ ಅರ್ಹ ಪ್ರಜೆಗಳಿಗೆ ಪರಿಹಾರ ವಿತರಿಸಲು 1.9 ಟ್ರಿಲಿಯನ್‌ ಡಾಲರ್‌ ಪ್ಯಾಕೇಜ್‌ಗೆ ಸಂಬಂಧಿಸಿದ ಮಸೂದೆಯಿಂದ ಈ ಕನಿಷ್ಠ ವೇತನ ಹೆಚ್ಚಳ ಅಂಶವನ್ನು ಕೈಬಿಡಬೇಕು ಎಂದು ರಿಪಬ್ಲಿಕನ್‌ ಸದಸ್ಯರು ಪಟ್ಟು ಹಿಡಿದಿದ್ದೇ ಈ ಹಿನ್ನಡೆ ಕಾರಣ.

ಈ ಕುರಿತ ಚರ್ಚೆ ನಂತರ ಮಾತನಾಡಿದ, ಸಂಧಾನಕಾರರಾದ ಎಲಿಜಬೆತ್‌ ಮ್ಯಾಕ್‌ಡೊನೊ, ‘ರಿಪಬ್ಲಿಕನ್‌ ಸಂಸದರಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ, ಕನಿಷ್ಠ ವೇತನಕ್ಕೆ ಸಂಬಂಧಿಸಿದ ವಿಷಯಕ್ಕೆ ಸಂಸತ್‌ನ ಅನುಮೋದನೆ ಸಿಕ್ಕಿಲ್ಲ’ ಎಂದು ಪ್ರಕಟಿಸಿದರು.

‘ಸೆನಟ್‌ನಲ್ಲಿನ ಈ ಬೆಳವಣಿಗೆಯಿಂದ ಅಧ್ಯಕ್ಷ ಜೋ ಬೈಡನ್‌ ಅವರಿಗೆ ತೀವ್ರ ನಿರಾಸೆಯಾಗಿದೆ. ಆದರೆ, ಸಂಸದರ ಅಭಿಪ್ರಾಯಕ್ಕೆ ಅವರು ಮನ್ನಣೆ ನೀಡಿದ್ದಾರೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ ಸಾಕಿ ಹೇಳಿದರು.

‘ಈ ದೇಶದ ಯಾವ ಪ್ರಜೆಯೂ ಪೂರ್ಣಾವಧಿಗೆ ದುಡಿದರೂ, ಬಡತನದಿಂದ ನರಳಬಾರದು. ಹೀಗಾಗಿ, ಕನಿಷ್ಠ ವೇತನ ಹೆಚ್ಚಳಕ್ಕೆ ಅನುಮೋದನೆ ಪಡೆಯಲು ಸಂಸದರ ಮನವೊಲಿಸಲು ಬೈಡನ್‌ ತಮ್ಮ ಪ್ರಯತ್ನ ಮುಂದುವರಿಸುವರು’ ಎಂದೂ ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು