ಶಾಂಘೈನಲ್ಲಿ ನಾಳೆಯಿಂದ ಲಾಕ್‌ಡೌನ್ ನಿರ್ಬಂಧ ತೆರವು

ಶಾಂಘೈ: ಚೀನಾದ ವಾಣಿಜ್ಯ ರಾಜಧಾನಿ ಶಾಂಘೈನಲ್ಲಿ ವಿಧಿಸಲಾಗಿದ್ದ ಎರಡು ತಿಂಗಳ ಕಠಿಣ ಲಾಕ್‌ಡೌನ್ ನಿರ್ಬಂಧಗಳು ಮೇ 31ಕ್ಕೆ ಮುಕ್ತಾಯವಾಗಲಿದೆ. ಜೂನ್ 1ರಿಂದ ಖಾಸಗಿ ಟಾಕ್ಸಿಗಳು ಮತ್ತೆ ರಸ್ತೆಗಿಳಿಯಲಿವೆ. ಜನರು ಲಾಕ್‌ಡೌನ್ ಪೂರ್ವದಂತೆ ಮುಕ್ತವಾಗಿ ಓಡಾಡಬಹುದಾಗಿದೆ.
ಬಸ್ ಮತ್ತು ರೈಲು ಸಂಚಾರ ಪುನರಾರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪರಿಸ್ಥಿತಿ ದಿನೇ ದಿನೇ ಸುಧಾರಿಸುತ್ತಿದೆ. ಹೀಗಾಗಿ ನಿರ್ಬಂಧ ತೆರವುಗೊಳಿಸಲಾಗುತ್ತಿದೆ. ಆದರೆ ಜನರು ಮಾಸ್ಕ್ ಧರಿಸಬೇಕು ಮತ್ತು ಗುಂಪುಗೂಡಬಾರದು. ತಪ್ಪದೆ ಲಸಿಕೆ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.
2.5 ಕೋಟಿ ಜನಸಂಖ್ಯೆಯ ಶಾಂಘೈನಲ್ಲಿ ಏಪ್ರಿಲ್ 1ರಿಂದ ಕಠಿಣ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.