ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update | ರಷ್ಯಾದಲ್ಲಿ 10 ಲಕ್ಷ ಮೀರಿದ ಕೋವಿಡ್‌ ಪ್ರಕರಣಗಳು

Last Updated 1 ಸೆಪ್ಟೆಂಬರ್ 2020, 16:35 IST
ಅಕ್ಷರ ಗಾತ್ರ

ವಿಶ್ವದ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಮಂಗಳವಾರ 2,57,35,141ಕ್ಕೆ ಏರಿಕೆಯಾಗಿದ್ದು, ಈ ವರೆಗೆ 8,56,608 ಮಂದಿ ಪಿಡುಗಿನಿಂದ ಪ್ರಾಣ ಬಿಟ್ಟಿದ್ದಾರೆ.

‘ಕೋವಿಡ್‌ ವರ್ಡೋಮೀಟರ್‌’ ಪ್ರಕಾರ ವಿಶ್ವದಲ್ಲಿ 1,80,17,975 ಮಂದಿ ಈ ಕಾಯಿಲೆಯಿಂದ ಗುಣಮುಖರಾಗಿದ್ದಾರೆ. ಸದ್ಯ ಜಗತ್ತಿನಲ್ಲಿ 6,860,558 ಸಕ್ರಿಯ ಪ್ರಕರಣಗಳಿವೆ.

ವಿಶ್ವದಲ್ಲಿ ಅತಿಹೆಚ್ಚು ಕೋವಿಡ್‌ ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅಲ್ಲಿ, 60,36,569 ಪ್ರಕರಣಗಳು ವದಿಯಾಗಿದ್ದು, 1,83,689 ಮಂದಿ ಮೃತಪಟ್ಟಿದ್ದಾರೆ. ಬ್ರೆಜಿಲ್‌ನಲ್ಲಿ 39,08,272 ಪ್ರಕರಣಗಳಿದ್ದು, 1,21,381 ಜನ ಪಿಡುಗಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ 36,91,166 ಪ್ರಕರಣಗಳಿದ್ದು, 65,288 ಸತ್ತಿದ್ದಾರೆ.

ರಷ್ಯಾದಲ್ಲಿ 10 ಲಕ್ಷ ಮೀರಿದ ಕೋವಿಡ್‌ ಪ್ರಕರಣಗಳು

ರಷ್ಯಾದಲ್ಲಿ ಮಂಗಳವಾರ 4,729 ಹೊಸ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್‌ ಪ್ರಕರಣಗಳು 10 ಲಕ್ಷ ಮೀರಿದೆ. ಸದ್ಯ ದೇಶದ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 10,00,048 ಆಗಿದೆ. ಈ ಮೂಲಕ ರಷ್ಯಾ ಅಮೆರಿಕ, ಬ್ರೆಜಿಲ್ ಮತ್ತು ಭಾರತದ ನಂತರದ ನಾಲ್ಕನೇ ಸ್ಥಾನದಲ್ಲಿದೆ. ಈ ಮಧ್ಯೆ ಅಲ್ಲಿ ಮೊದಲ ದರ್ಜೆಯ ಶಾಲೆಗಳೂ ಆರಂಭವಾಗಿವೆ.

ವಿಪತ್ತಿಗೆ ದಾರಿ: ಆರೋಗ್ಯ ಸಂಸ್ಥೆ ಮುಖ್ಯಸ್ಥ

ಕೋವಿಡ್‌ ಸಾಂಕ್ರಾಮಿಕದ ಮಧ್ಯೆಯೇ ಸಮಾಜಗಳನ್ನು ಲೌಕ್‌ಡೌನ್‌ನಿಂದ ಮುಕ್ತಗೊಳಿಸುತ್ತಿರುವುದು ವಿಪತ್ತಿಗೆ ದಾರಿ ಮಾಡಿಕೊಟ್ಟಂತೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಡಾನೊಮ್ ಗೆಬ್ರೆಯೆಸಸ್ ಹೇಳಿದ್ದಾರೆ. ಅಲ್ಲದೆ, ಸಮಾಜವನ್ನು ಮುಕ್ತಗೊಳಿಸುತ್ತಿರುವ ದೇಶಗಳು ವೈರಸ್‌ ನಿಗ್ರಹಿಸುವ ಬಗ್ಗೆ ಗಂಭೀರವಾಗಿರಬೇಕು ಎಂದು ಒತ್ತಾಯಿಸಿದರು.

ಮೂರನೇ ಹಂತ ತಲುಪಿದ ಆಸ್ಟ್ರಾಜೆಂಕಾದ ಕೋವಿಡ್‌–19 ಲಸಿಕೆ: ಟ್ರಂಪ್‌

ಆಕ್ಸ್‌ಫರ್ಡ್ ಯೂನಿವರ್ಸಿಟಿಯಲ್ಲಿ ಸಂಶೋಧಕರು ಅಭಿವೃದ್ಧಿ ಪಡಿಸಿರುವ ಲಸಿಕೆಯ ಮನುಷ್ಯರ ಮೇಲಿನ ಪ್ರಯೋಗಗಳಿಗೆ ಅಮೆರಿಕದ 80 ಭಾಗಗಳಲ್ಲಿ ಸುಮಾರು 30,000 ಸ್ವಯಂ ಸೇವಕರನ್ನು ನೋಂದಾಯಿಸಿಕೊಳ್ಳಲಿದೆ. 'ಜನರು ಅಸಾಧ್ಯವೆಂದೇ ಭಾವಿಸಿರುವ ಕಾರ್ಯಗಳನ್ನು ನಾವು ಅಮೆರಿಕದಲ್ಲಿ ನಡೆಸುತ್ತಿದ್ದೇವೆ' ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಕೋವಿಡ್‌ ಲಾಕ್‌ಡೌನ್‌ ತೆರವು: ಇಂಗ್ಲೆಂಡ್‌ನಲ್ಲಿ ಶಾಲೆ, ಕಾಲೇಜು ಪುನರಾರಂಭ

ಕೊರೊನಾ ವೈರಸ್‌ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಮಾರ್ಚ್‌ನಿಂದ ಬಾಗಿಲು ಮುಚ್ಚಿರುವ ಶಾಲೆ ಮತ್ತು ಕಾಲೇಜುಗಳು ಮಂಗಳವಾರದಿಂದ ಪುನರಾರಂಭಗೊಂಡಿವೆ. ಅಂತರ ಕಾಯ್ದುಕೊಳ್ಳುವುದು ಸೇರಿದಂತೆ 'ನಿಯಂತ್ರಿತ ವ್ಯವಸ್ಥೆಯೊಂದಿಗೆ' ವಿದ್ಯಾ ಸಂಸ್ಥೆಗಳನ್ನು ತೆರೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT