ಮಂಗಳವಾರ, ಜೂನ್ 28, 2022
26 °C

ಡೆಲ್ಟಾ ರೂಪಾಂತರ ಆಲ್ಫಾಗಿಂತ 60% ಹೆಚ್ಚು ಹರಡಬಲ್ಲದು: ಬ್ರಿಟನ್ ತಜ್ಙರ ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಕೋವಿಡ್-19ನ ಡೆಲ್ಟಾ ರೂಪಾಂತರ ಅಥವಾ B1.617.2ಕಳವಳಕಾರಿ ವೈರಸ್, ಬ್ರಿಟನ್ನಿನಲ್ಲಿ ಗುರುತಿಸಲಾದ ಆಲ್ಫಾ ರೂಪಾಂತರಕ್ಕಿಂತ ಶೇಕಡಾ 60 ರಷ್ಟು ಹೆಚ್ಚು ಹರಡಬಲ್ಲದು ಮತ್ತು ಲಸಿಕೆಗಳ ಪರಿಣಾಮಕಾರಿತ್ವವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ ಎಂದು ಬ್ರಿಟನ್ ಆರೋಗ್ಯ ತಜ್ಞರು ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ.

ವಾರಕ್ಕೊಮ್ಮೆ ವಿಒಸಿ(ವೇರಿಯಂಟ್ ಆಫ್ ಕನ್ಸರ್ನ್)ಗಳ ಬಗ್ಗೆ ಪರಿಶೀಲನೆ ನಡೆಸುವ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ (ಪಿಎಚ್‌ಇ), ಡೆಲ್ಟಾ ವಿಒಸಿಯ ಪ್ರಕರಣಗಳು 29,892 ರಷ್ಟು ಏರಿಕೆಯಾಗಿದ್ದು, ದೇಶದಲ್ಲಿ 42,323 ಕ್ಕೆ ತಲುಪಿದೆ. ಶೇಕಡಾ 70 ರಷ್ಟು ಹೆಚ್ಚಾಗಿದೆ ಎಂದು ಸಂಸ್ಥೆ ಹೇಳಿದೆ.

ಇತ್ತೀಚಿನ ಮಾಹಿತಿಯ ಪ್ರಕಾರ, ಬ್ರಿಟನ್‌ನಲ್ಲಿ ದೃಢಪಡುತ್ತಿರುವ ಹೊಸ ಕೋವಿಡ್ ಪ್ರಕರಣಗಳಲ್ಲಿ ಶೇಕಡಾ 90 ರಷ್ಟು ಪ್ರಕರಣಗಳು ಡೆಲ್ಟಾ ರೂಪಾಂತರದಿಂದ ಆಗಿವೆ. ಆಲ್ಫಾ ವಿಒಸಿಗೆ ಹೋಲಿಸಿದರೆ ಗಮನಾರ್ಹವಾಗಿ ಹೆಚ್ಚಿನ ಸೋಂಕಿನ ದರವನ್ನು ತೋರಿಸುತ್ತಲೇ ಇದೆ ಎಂದು ತಿಳಿಸಿದೆ.

‘ಪಿಎಚ್‌ಇಯ ಹೊಸ ಸಂಶೋಧನೆಯು ಡೆಲ್ಟಾ ರೂಪಾಂತರವು ಆಲ್ಫಾ ರೂಪಾಂತರಕ್ಕೆ ಹೋಲಿಸಿದರೆ ಸುಮಾರು 60 ಪ್ರತಿಶತದಷ್ಟು ಪ್ರಸರಣದ ಅಪಾಯ ಹೊಂದಿದೆ ಎಂದು ಸೂಚಿಸುತ್ತದೆ’.

‘ಬ್ರಿಟನ್ನಿನ ಹಲವು ಪ್ರದೇಶಗಳಲ್ಲಿ ಡೆಲ್ಟಾ ಪ್ರಕರಣಗಳ ದರ ಹೆಚ್ಚಾಗಿದ್ದು, ಪ್ರಕರಣಗಳು ದ್ವಿಗುಣಗೊಳ್ಳುವ ಪ್ರಾದೇಶಿಕ ಅಂದಾಜುಗಳು 4.5 ದಿನಗಳಿಂದ 11.5 ದಿನಗಳವರೆಗೆ ಇರುತ್ತವೆ ’ ಎಂದು ಪಿಎಚ್‌ಇ ತನ್ನ ಇತ್ತೀಚಿನ ವಿಶ್ಲೇಷಣೆಯಲ್ಲಿ ತಿಳಿಸಿದೆ.

‘ಆಲ್ಫಾಕ್ಕೆ ಹೋಲಿಸಿದರೆ ಡೆಲ್ಟಾ ರೂಪಾಂತರವು ಲಸಿಕೆ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ ಎಂಬ ಬಗ್ಗೆ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನಿಂದ ವಿಶ್ಲೇಷಣೆಗಳಿವೆ. ಒಂದು ಡೋಸ್ ನಂತರ ಸೋಮಕು ತಗುಲಿದರೆ ಸರಿಸುಮಾರು 15 ರಿಂದ 20 ಪ್ರತಿಶತದಷ್ಟು ಲಸಿಕೆ ಪರಿಣಾಮಕಾರಿತ್ವ ಕುಗ್ಗಿಸುತ್ತದೆ ಎಂದು ಅದರ ಅಪಾಯದ ಮೌಲ್ಯಮಾಪನ ವಿಶ್ಲೇಷಣೆ ಹೇಳುತ್ತದೆ. ಎರಡು ಡೋಸ್ ನಂತರ ಡೆಲ್ಟಾ ವಿರುದ್ಧ ಲಸಿಕೆ ಪರಿಣಾಮಕಾರಿತ್ವವು ಹೆಚ್ಚಾಗಿದೆ. ಆದರೆ ಆಲ್ಫಾಕ್ಕೆ ಹೋಲಿಸಿದರೆ ಡೆಲ್ಟಾ ವಿರುದ್ಧದ ಪರಿಣಾಮಕತ್ವ ಕಡಿತ ಇದೆ’ ಎಂದು ತಿಳಿದುಬಂದಿದೆ ಎಂದು ಪಿಎಚ್‌ಇ ತಿಳಿಸಿದೆ. ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯ ಎರಡು ಡೋಸ್‌ಗಳ ನಂತರ ಲಸಿಕೆ ಪರಿಣಾಮಕಾರಿತ್ವದ ಬದಲಾವಣೆಯ ಪರಿಮಾಣದ ಸುತ್ತ ಅನಿಶ್ಚಿತತೆಯಿದೆ,’ ಎಂದು ಅದು ಹೇಳುತ್ತದೆ.

ಡೆಲ್ಟಾ ರೂಪಾಂತರವು ಈಗ ಇಂಗ್ಲೆಂಡ್‌ನಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ಪ್ರಕರಣಗಳಿಗೆ ಕಾರಣವಾಗಿದೆ ಎಂದು ಪಿಎಚ್‌ಇ ಹೇಳಿದೆ/

‘ಮುಂದಿನ ಕೆಲವು ವಾರಗಳ ಕಾಲ ಪಿಎಚ್‌ಇ ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ. ಆದರೆ, ಎರಡು ಡೋಸ್ ಲಸಿಕೆ ಪಡೆದಿರುವ ಹೆಚ್ಚಿನ ಜನಸಂಖ್ಯೆ ಹೊಂದಿರುವ ಇಂಗ್ಲೆಂಡ್ ಈ ರೂಪಾಂತರದ ಪ್ರಭಾವವನ್ನು ತಡೆಯುವಲ್ಲಿ ಮುಂದುವರೆದಿದೆ ಎಂದು ಡೇಟಾ ಸೂಚಿಸುತ್ತದೆ’ ಎಂದು ಅದು ಹೇಳುತ್ತದೆ. ಆರೋಗ್ಯ ತಜ್ಞರು ಡೆಲ್ಟಾ ವಿಒಸಿಯನ್ನು ಪತ್ತೆಹಚ್ಚಲು ಜಿನೋಟೈಪಿಂಗ್ ಪರೀಕ್ಷೆಗಳನ್ನು ಬಳಸುತ್ತಿದ್ದಾರೆ. ಇದು 48 ಗಂಟೆಗಳ ಒಳಗೆ ಫಲಿತಾಂಶವನ್ನು ನೀಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು