ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಕೋಟಿ ಜೀವಗಳನ್ನು ಉಳಿಸಿದ ಕೋವಿಡ್ ಲಸಿಕೆ: ಅಧ್ಯಯನ ವರದಿ

Last Updated 24 ಜೂನ್ 2022, 1:47 IST
ಅಕ್ಷರ ಗಾತ್ರ

ಪ್ಯಾರಿಸ್: ಕೋವಿಡ್ ಲಸಿಕೆ ನೀಡಲು ಆರಂಭಿಸಿದ ಮೊದಲ ವರ್ಷದಲ್ಲಿ ಸುಮಾರು 2 ಕೋಟಿ ಜೀವಗಳನ್ನು ಉಳಿಸಲು ಸಾಧ್ಯವಾಗಿದೆ ಎಂದು ಅಧ್ಯಯನ ವರದಿ ಹೇಳಿದೆ.

‘ದಿ ಲ್ಯಾನ್ಸೆಟ್ ಇನ್‌ಫೆಕ್ಷಿಯಸ್ ಡಿಸೀಸಸ್‘ ವರದಿಯಲ್ಲಿ ಪ್ರಕಟವಾಗಿರುವಂತೆ, ಕೋವಿಡ್‌ನಿಂದ ಉಂಟಾಗಬಹುದಾಗಿದ್ದ ಅಪಾರ ಸಂಖ್ಯೆಯ ಸಾವನ್ನು ತಡೆಯುವಲ್ಲಿ ಲಸಿಕೆ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಲಾಗಿದೆ.

2020ರ ಡಿಸೆಂಬರ್ 8ರಿಂದ 2021ರ ಡಿಸೆಂಬರ್ 8ರ ಅವಧಿಯಲ್ಲಿ 185 ರಾಷ್ಟ್ರಗಳ ವರದಿಯನ್ನು ತರಿಸಿಕೊಂಡು, ಅಧ್ಯಯನ ಮಾಡಲಾಗಿದೆ. ಅದರ ಪ್ರಕಾರ, ಕೋವಿಡ್ ಲಸಿಕೆ ಪಡೆದ ಬಳಿಕ, ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

ಕೋವಿಡ್‌ ಸೋಂಕಿಗೆ ತುತ್ತಾಗಿ 3.4 ಕೋಟಿ ಜನರು ಸಾವಿಗೀಡಾಗುವ ಸಾಧ್ಯತೆಯಿತ್ತು. ಆದರೆ, ಲಸಿಕೆ ಪಡೆದ ಬಳಿಕ ಸಾವಿನ ಸಂಖ್ಯೆಯಲ್ಲಿ ಶೇ 63ರಷ್ಟು ಇಳಿಕೆಯಾಯಿತು ಎಂದು ವರದಿಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT