ಭಾನುವಾರ, ಸೆಪ್ಟೆಂಬರ್ 26, 2021
22 °C

Covid-19 World Update| ಬ್ರೆಜಿಲ್‌ನಲ್ಲಿ 1.50 ಲಕ್ಷ ದಾಟಿದ ಸಾವಿನ ಸಂಖ್ಯೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ರಿಯೋ ಡಿ ಜನೈರೊ (ಬ್ರೆಜಿಲ್‌): ಅತಿ ಹೆಚ್ಚು ಕೋವಿಡ್‌–19 ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ ಭಾನುವಾರ 1,50,000 ತಲುಪಿದೆ.

ಈ ಮೂಲಕ ಜಗತ್ತಿನಲ್ಲಿ ಕೋವಿಡ್‌ ಕಾರಣದಿಂದ ಅತಿಹೆಚ್ಚು ಸಾವು ಕಂಡ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರೆಜಿಲ್‌ ಸದ್ಯ ಎರಡನೇ ಸ್ಥಾನದಲ್ಲಿದೆ.

ಇನ್ನು ಜಗತ್ತಿನಲ್ಲಿ ಈ ವರೆಗೆ ಕೋವಿಡ್‌ನಿಂದಾಗಿ 10,74,276 ಮಂದಿ ಮೃತಪಟ್ಟಿದ್ದಾರೆ. ಈ ವರೆಗೆ 3,72,88,362 ಎಂದು ಅಮೆರಿಕದ ‘ಜಾನ್ಸ್‌ ಹಾಪ್‌ಕಿನ್ಸ್‌ ಕೋವಿಡ್‌ ಟ್ರ್ಯಾಕರ್‌‘ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

2,81,98,870 ಮಂದಿ ಈ ವರೆಗೆ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ ವಿಶ್ವದಲ್ಲಿ 83,24,817 ಸಕ್ರಿಯ ಪ್ರಕರಣಗಳಿದ್ದು, 68,752 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಕೋವಿಡ್‌ ಟ್ರ್ಯಾಕರ್‌ ವೆಬ್‌ಸೈಟ್‌ ‘ವರ್ಲ್ಡೋಮೀಟರ್‌’ನಲ್ಲಿ ಹೇಳಿದೆ.

ವಿಶ್ವದಲ್ಲಿ ಅತಿಹೆಚ್ಚು ಕೊರೊನಾ ವೈರಸ್‌ ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಎಂದಿನಂತೇ ಅಮೆರಿಕ ಅಗ್ರ ಸ್ಥಾನದಲ್ಲಿದೆ. ಇಲ್ಲಿ 77,33,258 ಪ್ರಕರಣಗಳಿದ್ದರೆ, 2,14,599 ಮಂದಿ ಮೃತಪಟ್ಟಿದ್ದಾರೆ. ಅದರ ನಂತರದ ಸ್ಥಾನದಲ್ಲಿ ಭಾರತ ಇದ್ದು, ಇಲ್ಲಿ ಈ ವರೆಗೆ 70,53,806 ಮಂದಿಗೆ ಸೋಂಕು ಬಾಧಿಸಿದೆ. ಭಾರತದಲ್ಲಿ ಈ ವರೆಗೆ 1,08,334 ಮಂದಿ ಮೃತಪಟ್ಟಿದ್ದಾರೆ. ಮೂರನೇ ಸ್ಥಾನದಲ್ಲಿ ಬ್ರೆಜಿಲ್‌ ಇದ್ದು, ಇಲ್ಲಿ ಈ ವರೆಗೆ 50,82,637 ಮಂದಿಗೆ ಸೋಂಕು ತಗುಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು