ಸೋಮವಾರ, ಮೇ 23, 2022
21 °C

ರಷ್ಯಾ ವಶಕ್ಕೆ ಕ್ರೆಮಿನ್ನಾ ನಗರ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಲುವಿವ್‌: ಲುಹಾನ್‌ಸ್ಕ್‌ ಪ್ರಾಂತ್ಯದ ಪೂರ್ವದ ಕ್ರೆಮಿನ್ನಾ ನಗರವನ್ನು ರಷ್ಯಾ ಪಡೆಗಳು ರಾತ್ರೋರಾತ್ರಿ ವಶಕ್ಕೆ ತೆಗೆದುಕೊಂಡಿದ್ದು, ಇನ್ನು ಮುಂದೆ ನಾಗರಿಕರನ್ನು ನಗರದಿಂದ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದು ಪ್ರಾಂತ್ಯದ ಗವರ್ನರ್‌ ಸೆರಿಹಿ ಹೈದೈ ಸೋಮವಾರ ತಿಳಿಸಿದ್ದಾರೆ.

ಕ್ರೆಮಿನ್ನಾದಿಂದ ಪಲಾಯನಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ನಾಗರಿಕರನ್ನು ಕೊಂದಿದ್ದಾರೆ ಎಂದು ಅವರು ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.

ಜೊಲೊಟ್ ಪಟ್ಟಣದಲ್ಲಿ ನಡೆದ ಶೆಲ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದಾರೆ. ಲಿಸಿಚಾನ್‌ಸ್ಕ್‌ ನಗರದಲ್ಲಿ ಆರು ಮಂದಿ ಗಸ್ತು ಪೊಲೀಸರು ಗಾಯಗೊಂಡಿದ್ದಾರೆ.

ಸ್ವೀಕೃತವಲ್ಲದ ವ್ಯಕ್ತಿಗಳು: ರಷ್ಯಾದ 10 ರಾಜತಾಂತ್ರಿಕರನ್ನು ಬಲ್ಗೇರಿಯಾ ಉಚ್ಚಾಟಿಸಿದ್ದಕ್ಕೆ, ಪ್ರತಿಯಾಗಿ ಮಾಸ್ಕೊ
ದಲ್ಲಿನ ಬಲ್ಗೇರಿಯಾ ರಾಯಭಾರ ಕಚೇರಿಯ ಕೆಲವು ಉದ್ಯೋಗಿಗಳನ್ನು ‘ಸ್ವೀಕೃತವಲ್ಲದ ವ್ಯಕ್ತಿಗಳು’ ಎಂದು ರಷ್ಯಾ ಸೋಮವಾರ ಘೋಷಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.