ಭಾನುವಾರ, ಮೇ 29, 2022
22 °C

ಓಮೈಕ್ರಾನ್‌ ಕೊನೆ ತಳಿ ಎಂದು ಭಾವಿಸುವುದು ಅಪಾಯಕಾರಿ: ಡಬ್ಲ್ಯುಎಚ್‌ಒ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಜಿನಿವಾ: ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಓಮೈಕ್ರಾನ್ ರೂಪಾಂತರವು ಕೊರೊನಾ ವೈರಸ್‌ನ ಕೊನೆಯ ತಳಿ ಎಂದು ಭಾವಿಸುವುದಾಗಲಿ, ಕೋವಿಡ್‌ ಸಾಂಕ್ರಾಮಿಕವು ಅಂತಿಮ ಘಟ್ಟದಲ್ಲಿದೆ ಎಂದು ತಿಳಿದುಕೊಳ್ಳುವುದಾಗಲಿ ಅಪಾಯಕಾರಿ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟುಡ್ರೊಸ್‌ ಅಡೆನಾಮೊ ಗೆಬ್ರೆಯಾಸಸ್‌ ಅಭಿಪ್ರಾಯಪಟ್ಟಿದ್ದಾರೆ.

ಪರೀಕ್ಷೆ ಮತ್ತು ಲಸಿಕೆ ಎಂಬ ತಂತ್ರವನ್ನು ಸಮಗ್ರವಾಗಿ ಬಳಸಿಕೊಂಡರೆ ಕೋವಿಡ್ -19 ಸಾಂಕ್ರಾಮಿಕದಿಂದ ಈ ವರ್ಷ ಪಾರಾಗಲು ಸಾಧ್ಯವಿದೆ ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಸಭೆಯ ಪ್ರಾರಂಭದಲ್ಲಿ ಮಾತನಾಡಿದ ಟೆಡ್ರೊಸ್, ‘ಒಂಬತ್ತು ವಾರಗಳ ಹಿಂದೆ ಓಮೈಕ್ರಾನ್‌ ಅನ್ನು ಮೊದಲ ಬಾರಿಗೆ ಗುರುತಿಸಲಾಯಿತು. ಅಂದಿನಿಂದ ಇಂದಿನ ವರೆಗೆ 80 ದಶಲಕ್ಷಕ್ಕಿಂತಲೂ ಹೆಚ್ಚು ಪ್ರಕರಣಗಳು ವರದಿಯಾಗಿವೆ’ ಎಂದು ಅವರು ಹೇಳಿದರು.

‘ಇನ್ನೂ ಹೆಚ್ಚಿನ ರೂಪಾಂತರ ತಳಿಗಳು ಹೊರಹೊಮ್ಮಲು ಪರಿಸ್ಥಿತಿ ಪ್ರಶಸ್ತವಾಗಿದೆ’ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು