ಶುಕ್ರವಾರ, ಡಿಸೆಂಬರ್ 4, 2020
22 °C

ದಾಳಿಕೋರರಲ್ಲಿ ಒಬ್ಬ ಇಸ್ಲಾಮಿಕ್‌ ಸ್ಟೇಟ್‌ ಭಯೋತ್ಪಾದಕ: ಆಸ್ಟ್ರಿಯಾದ ಸಚಿವ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ವಿಯೆನ್ನಾ: ಮಧ್ಯ ವಿಯೆನ್ನದಾದ್ಯಂತ ನಡೆದ ಸರಣಿ ಭಯೋತ್ಪಾದಕ ದಾಳಿಗಳನ್ನು ನಡೆಸಿರುವ ತಂಡದಲ್ಲಿ, ಒಬ್ಬ ‘ಇಸ್ಲಾಮಿಕ್‌ ಸ್ಟೇಟ್‌ ಗುಂಪಿಗೆ ಸೇರಿದ ಭಯೋತ್ಪಾದಕ‘ನಿದ್ದಾನೆ ಎಂದು ಆಸ್ಟ್ರಿಯಾದ ಆಂತರಿಕ ಸಚಿವ ಕಾರ್ಲ್‌ ನೆಹಮ್ಮರ್‌ ಮಂಗಳವಾರ ಹೇಳಿದ್ದಾರೆ.

ವರ್ಚುವಲ್‌ ಸುದ್ದಿಗೋಷ್ಠಿ ಮೂಲಕ ಮಾತನಾಡಿದ ಅವರು, ‘ಪೊಲೀಸರಿಂದ ಹತ್ಯೆಯಾದ ಈ ಭಯೋತ್ಪಾದಕ, ಭಾರಿ ಪ್ರಮಾಣದ ಶಸ್ತ್ರಸಜ್ಜಿತ ಮತ್ತು ಸ್ಫೋಟಕಗಳನ್ನೊಳಗೊಂಡ ಬೆಲ್ಟ್‌ ಧರಿಸಿದ್ದ. ಈತ ಇಸ್ಲಾಮಿಕ್ ಸ್ಟೇಟ್‌ ಬಗ್ಗೆ ಸಹಾನುಭೂತಿ ಹೊಂದಿದವನಾಗಿದ್ದ‘ ಎಂದು ಮಾಹಿತಿ ನೀಡಿದರು. ಇದೇ ವೇಳೆ ಸಾರ್ವಜನಿಕರು ಮನೆಯಲ್ಲಿಯೇ ಇರಬೇಕು ಎಂದು ಮನವಿ ಮಾಡಿದರು.

ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿಭದ್ರತೆ ಒದಗಿಸಲಾಗಿದ್ದು, ದಾಳಿ ನಡೆಸಿದ ಉಗ್ರರಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿಯೆನ್ನಾದಲ್ಲಿ ಉಗ್ರರ ದಾಳಿ: ಮೂವರ ಸಾವು, 15 ಮಂದಿಗೆ ಗಾಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು