ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ಭೂಕಂಪ: ಸಾವಿನ ಸಂಖ್ಯೆ 1,150 ಕ್ಕೆ ಏರಿಕೆ

ಅಕ್ಷರ ಗಾತ್ರ

ಕಾಬೂಲ್: ಅಫ್ಗಾನಿಸ್ತಾನದಲ್ಲಿ ಮಂಗಳವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮಡಿದವರ ಸಂಖ್ಯೆ 1,150 ಕ್ಕೆ ಏರಿಕೆಯಾಗಿದೆ.

6.1 ತೀವ್ರತೆಯ ಭೂಕಂಪದಿಂದಾಗಿ ಸಾವಿರಾರು ಮಂದಿ ಆಶ್ರಯ ಕಳೆದುಕೊಂಡಿದ್ದು, ಸುಮಾರು 3,000 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಅಫ್ಗಾನಿಸ್ತಾನದ ಸರ್ಕಾರಿ ಮಾಧ್ಯಮ ಮಾಹಿತಿ ನೀಡಿದೆ.

ಕಟ್ಟಡಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗ್ರಾಮಸ್ಥರು ಕೈಯಿಂದಲೇ ಅವಶೇಷಗಳನ್ನು ಹೊರತೆಗೆಯುತ್ತಿದ್ದಾರೆ.

ಪೂರ್ವ ಅಫ್ಗಾನಿಸ್ತಾನದ ಗಯಾನ್ ಜಿಲ್ಲೆಯಲ್ಲಿ ಕನಿಷ್ಠ 1,000 ಮನೆಗಳಿಗೆ ಹಾನಿಯಾಗಿದ್ದು, ಖೋಸ್ಟ್ ಪ್ರಾಂತ್ಯದ ಸ್ಪೆರೆ ಜಿಲ್ಲೆಯಲ್ಲಿ 800 ಮನೆಗಳು ನೆಲಸಮಗೊಂಡಿವೆ.

ಜರ್ಮನಿ, ನಾರ್ವೆ ಸೇರಿದಂತೆ ಇತರ ದೇಶಗಳು ವಿಶ್ವಸಂಸ್ಥೆಯ ಮೂಲಕ ಅಫ್ಗಾನಿಸ್ತಾನಕ್ಕೆ ಸಹಾಯಹಸ್ತ ಚಾಚುವುದಾಗಿ ಘೋಷಿಸಿವೆ.

ಭಾರತ, ಪಾಕಿಸ್ತಾನ, ಇರಾನ್‌ ಹಾಗೂ ಕತಾರ್‌ ದೇಶಗಳು ಭೂಕಂಪ ಪೀಡಿತ ಪ್ರದೇಶಗಳಿಗೆ ಮಾನವೀಯ ನೆರವು ನೀಡುವ ಕಾರ್ಯದಲ್ಲಿ ತೊಡಗಿವೆ.

ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಅಫ್ಗಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪವು ಲಕ್ಷಾಂತರ ಮಕ್ಕಳನ್ನು ಅಪೌಷ್ಟಿಕತೆಯ ಅಪಾಯಕ್ಕೆ ದೂಡಲಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT