ಶನಿವಾರ, ಅಕ್ಟೋಬರ್ 16, 2021
23 °C

ಶಾಹೀನ್ ಚಂಡಮಾರುತ: ಮೃತರ ಸಂಖ್ಯೆ 5ಕ್ಕೆ ಏರಿಕೆ

ಎಪಿ Updated:

ಅಕ್ಷರ ಗಾತ್ರ : | |

Prajavani

ದುಬೈ: ಅರಬ್ಬಿ ಸಮುದ್ರದಲ್ಲಿ ಹುಟ್ಟಿದ ಶಾಹೀನ್ ಚಂಡಮಾರುತ ಒಮನ್‌ನಲ್ಲಿ ಭಾರಿ ಮಳೆ, ಅನಾಹುತವನ್ನು ಉಂಟುಮಾಡಿದ್ದು, ಕನಿಷ್ಠ ಐವರು ಮೃತಪಟ್ಟಿದ್ದಾರೆ. ಇರಾನ್‌ನಲ್ಲಿ ಕೆಲವು ಮೀನುಗಾರರು ನಾಪತ್ತೆಯಾಗಿದ್ದಾರೆ.

ಚಂಡಮಾರುತದಿಂದ ಉಂಟಾದ ಪ್ರವಾಹದಿಂದ ವಾಹನ ಸವಾರರೊಬ್ಬ ಕೊಚ್ಚಿ ಹೋಗಿದ್ದ, ಅವರ ಶವವನ್ನು ಒಮನ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಶಾಹೀನ್ ಚಂಡಮಾರುತದಿಂದಾಗಿ ಒಮನ್‌ನಲ್ಲಿ ಭಾನುವಾರಿ ಭಾರಿ ಮಳೆ ಸುರಿದು, ಭೂಕುಸಿತ ಉಂಟಾಯಿತು. ಈ ಘಟನೆಯಲ್ಲಿ ಏಷ್ಯಾ ರಾಷ್ಟ್ರಗಳ ಇಬ್ಬರು ವಿದೇಶೀಯರು ಸಾವನ್ನಪ್ಪಿದ್ದರು. ಮಗುವೊಂದು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು.

ಪಾಕಿಸ್ತಾನ ಗಡಿ ಭಾಗ ಸಮೀಪದ ಇರಾನ್‌ನ ಪಸಬಂದರ್‌ನಲ್ಲಿ ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿದ್ದ ಐವರು ಮೀನುಗಾರರಲ್ಲಿ ಒಬ್ಬರ ಮೃತದೇಹವನ್ನು ರಕ್ಷಣಾಪಡೆಯವರು ಪತ್ತೆ ಮಾಡಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ವಾಹಿನಿ ವರದಿ ಮಾಡಿದೆ.

‘ಶಾಹೀನ್ ಚಂಡಮಾರುತದಿಂದ ಬೀಸುತ್ತಿರುವ ಗಾಳಿಯ ವೇಗ ಗಂಟೆಗೆ 90 ಕಿ.ಮೀ.ನಷ್ಟಿದ್ದು, ದುರ್ಬಲಗೊಳ್ಳುತ್ತಿದೆ‘ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಉಷ್ಣವಲಯ ಪ್ರದೇಶದಲ್ಲಿ ಚಂಡಮಾರುತವು ದುರ್ಬಲಗೊಳ್ಳುತ್ತದೆ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು