ಭಾನುವಾರ, ಜುಲೈ 25, 2021
25 °C

ಡೆತ್‌ ವ್ಯಾಲಿಯಲ್ಲಿ ಭೂಮಿಯಲ್ಲೇ ಅತ್ಯಂತ ಗರಿಷ್ಠ 54 ಡಿಗ್ರಿ ಸೆಲ್ಸಿಯಸ್‌ ಉಷ್ಠಾಂಶ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

 REUTERS/Bridget Bennett/File Photo

ಕ್ಯಾಲಿಫೋರ್ನಿಯಾ: ಸಾವಿನ ಕಣಿವೆ ಎಂದು ಗುರುತಿಸಲ್ಪಟ್ಟಿರುವ ಅಮೆರಿಕದ ಮರುಭೂಮಿ ಪ್ರದೇಶ ಕ್ಯಾಲಿಫೋರ್ನಿಯಾದ ಡೆತ್‌ ವ್ಯಾಲಿಯಲ್ಲಿ ಭೂಮಿಯಲ್ಲೇ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಶನಿವಾರ ಡೆತ್‌ ವ್ಯಾಲಿಯಲ್ಲಿ 54.4 ಡಿಗ್ರಿ ಸೆಲ್ಸಿಯಸ್‌ (130 ಫ್ಯಾರನ್‌ಹೀಟ್‌) ಉಷ್ಣಾಂಶ ದಾಖಲಾಗಿದ್ದು, ಇದುವರೆಗಿನ ಅತ್ಯಂತ ಗರಿಷ್ಠ ಉಷ್ಣಾಂಶವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ. ಕಳೆದ ವರ್ಷವೂ ಡೆತ್‌ ವ್ಯಾಲಿಯಲ್ಲೇ ಇಷ್ಟೇ ಪ್ರಮಾಣದ ಉಷ್ಣಾಂಶ ದಾಖಲಾಗಿತ್ತು.

ಡೆತ್‌ ವ್ಯಾಲಿಯು ಸದಾ ಬಿಸಿಗಾಳಿಯಿಂದ ಕೂಡಿದ ಫರ್ನನ್ಸ್‌ ಕ್ರೀಕ್‌ ಪ್ರದೇಶದಲ್ಲಿದ್ದು, ಇಲ್ಲಿನ ಉಷ್ಠಾಂಶವು ಕಳೆದ ಮೂರು ದಿನಗಳಲ್ಲಿ ಗರಿಷ್ಠ 53.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ರಾತ್ರಿ ವೇಳೆ ಉಷ್ಠಾಂಶ ಕೊಂಚ ತಗ್ಗಿದರೂ 32 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗೆ ಇಳಿದಿಲ್ಲ ಎಂದು 'ದಿ ಗಾರ್ಡಿಯನ್‌' ವರದಿ ಮಾಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು