ಮಂಗಳವಾರ, ಡಿಸೆಂಬರ್ 1, 2020
18 °C

ದಕ್ಷಿಣ ಆಫ್ರಿಕಾದಲ್ಲಿ ದೀಪಾವಳಿ ಸಡಗರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೊಹಾನ್ಸ್‌ಬರ್ಗ್‌: ಹರಿಣಗಳ ನಾಡು ದಕ್ಷಿಣ ಆಫ್ರಿಕಾದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಭಾರತದ  ಕೌನ್ಸಲ್‌ ಜನರಲ್‌ ಅಂಜು ರಂಜನ್‌ ಅವರು ಶನಿವಾರ ‘ಇಂಡಿಯಾ ಹೌಸ್‌’ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಕ್ಷಿಣ ಆಫ್ರಿಕಾ ಮೂಲದ ರಾಜತಾಂತ್ರಿಕರು ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

‘ಜೊಹಾನ್ಸ್‌ಬರ್ಗ್ ಅನ್ನು ‘ಬೆಳಕಿನ ನಗರಿ’ ಎಂದೇ ಕರೆಯಲಾಗುತ್ತದೆ. ಚಿನ್ನವನ್ನು ಅರಸಿ ಗ್ರಾಮೀಣ ಭಾಗದಿಂದ ಬರುತ್ತಿದ್ದ ವಲಸಿಗರು ಈ ನಗರವನ್ನು ಹೀಗೆ ಕರೆಯುತ್ತಿದ್ದರು’ ಎಂದು ಜೊಹಾನ್ಸ್‌ಬರ್ಗ್‌ ನಗರದ ಮೇಯರ್‌ ಜಿಯೊಫ್‌ ಮಖುಬೊ ಅವರು ಹೇಳಿದರು.

ಇದನ್ನೂ ಓದಿ: 

‘ದೀಪಾವಳಿಯ ಸಂದರ್ಭದಲ್ಲಿ ದೀಪಗಳನ್ನು ಬೆಳಗುವ ಮೂಲಕ ಕತ್ತಲೆ ಹೊಡೆದೋಡಿಸಲಾಗುತ್ತದೆ. ಹಬ್ಬದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್‌ ರಾಮಫೊಸಾ ಅವರು ಕೋವಿಡ್‌ ನಿಯಮಗಳನ್ನು ಸಡಿಲಿಸಿರುವುದು ಖುಷಿಯ ವಿಷಯ. ಹಾಗಂತ ಯಾರೂ ಮೈಮರೆಯಬಾರದು. ಕೋವಿಡ್‌ ಇನ್ನೂ ದೂರವಾಗಿಲ್ಲ. ಹೀಗಾಗಿ ಎಲ್ಲರೂ ಎಚ್ಚರದಿಂದ ಇರಬೇಕು’ ಎಂದರು.

‘ದೀಪಾವಳಿಯ ಸಂದರ್ಭದಲ್ಲಿ ಹಚ್ಚುವ ಹಣತೆಗಳು ಕತ್ತಲನ್ನು ದೂರಮಾಡಲಿ. ಒಳ್ಳೆಯ ತನವು ಪ್ರಜ್ವಲಿಸಲಿ. ವಿಶ್ವದೆಲ್ಲೆಡೆ ಶಾಂತಿ ಪಸರಿಸಲಿ’ ಎಂದು ಮಖುಬೊ ನುಡಿದರು.

ಇದನ್ನೂ ಓದಿ: 

‘‍ಪ್ರಾಚೀನ ಆರೋಗ್ಯ ವ್ಯವಸ್ಥೆಯ ಪಿತಾಮಹ ಎಂದೇ ಕರೆಯಲ್ಪಡುವ ಧನ್ವಂತರಿ ಅವರ ನೆನಪಾರ್ಥ ಭಾರತ ಸರ್ಕಾರವು ನವೆಂಬರ್‌ 13ನ್ನು ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ಆಚರಿಸುತ್ತಿದೆ’ ಎಂದು ರಂಜನ್‌ ಹೇಳಿದರು.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು