ಶನಿವಾರ, ಸೆಪ್ಟೆಂಬರ್ 25, 2021
29 °C

ಕೋವಿಡ್‌ 19: 135 ದೇಶಗಳಲ್ಲಿ ವ್ಯಾಪಿಸಿರುವ ಡೆಲ್ಟಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಕೋವಿಡ್‌–19ರ ಡೆಲ್ಟಾ ರೂಪಾಂತರ ತಳಿಯು ವಿಶ್ವದ 135 ದೇಶಗಳಲ್ಲಿ ವರದಿಯಾಗಿದ್ದು, ಜಾಗತಿಕವಾಗಿ  ವರದಿಯಾಗುತ್ತಿರುವ ಕೋವಿಡ್‌ ಪ್ರಕರಣಗಳ ಸಂಖ್ಯೆ ಮುಂದಿನ ವಾರದ ವೇಳೆಗೆ 20 ಕೋಟಿ ದಾಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.

ಡಬ್ಲ್ಯುಎಚ್‌ಒ ಬಿಡುಗಡೆ ಮಾಡಿರುವ ಕೋವಿಡ್‌ ಸಾಪ್ತಾಹಿಕ ವರದಿಯಲ್ಲಿ, ಜಾಗತಿಕವಾಗಿ 132 ದೇಶಗಳಲ್ಲಿ ಬೀಟಾ ರೂಪಾಂತರ ವೈರಸ್‌, 81 ದೇಶಗಳಲ್ಲಿ ಗಾಮಾ ವೈರಸ್‌ನ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದೆ.

182 ದೇಶಗಳಲ್ಲಿ ಆಲ್ಫಾ ರೂಪಾಂತರ ವೈರಸ್‌ ಹಾಗೂ 135 ದೇಶಗಳಲ್ಲಿ ಡೆಲ್ಟಾ ತಳಿಗಳು ವರದಿಯಾಗಿವೆ. ಡೆಲ್ಟಾ ವೈರಸ್‌ ಮೊದಲಿಗೆ ಗುರುತಿಸಲಾಗಿದ್ದು ಭಾರತದಲ್ಲಿ.

ಜಾಗತಿಕವಾಗಿ ಹೊಸ ಪ್ರಕರಣಗಳ ಸಂಖ್ಯೆ ತಿಂಗಳಿಂದ ಏರುಗತಿಯಲ್ಲಿ ಸಾಗಿದ್ದು, ಜುಲೈ 26ರಿಂದ ಆಗಸ್ಟ್‌ 1ರ ಅವಧಿಯಲ್ಲಿ 40 ಲಕ್ಷ ಪ್ರಕರಣಗಳು ವರದಿಯಾಗಿವೆ.

ಪೂರ್ವ ಮೆಡಿಟರೇನಿಯನ್ ಮತ್ತು ಪಶ್ಚಿಮ ಪೆಸಿಫಿಕ್ ಪ್ರದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದು ಹಿಂದಿನ ವಾರಕ್ಕೆ ಹೋಲಿಸಿದರೆ ಕ್ರಮವಾಗಿ ಶೇ 37 ಮತ್ತು 33 ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಶೇ 9ರಷ್ಟು ಪ್ರಕರಣಗಳು ಏರಿಕೆಯಾಗಿರುವ ವರದಿಯಾಗಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

ಹಿಂದಿನ ವಾರಕ್ಕೆ ಹೋಲಿಸಿದರೆ ಈ ವಾರ ವರದಿಯಾದ ಸಾವಿನ ಸಂಖ್ಯೆ ಶೇ 8ರಷ್ಟು ಕಡಿಮೆಯಾಗಿದ್ದು, 64,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು