ಮಂಗಳವಾರ, ಡಿಸೆಂಬರ್ 7, 2021
20 °C

ಇಂಗಾಲ ಶೂನ್ಯ ಹೊರಸೂಸುವಿಕೆಗೆ ಅಭಿವೃದ್ಧಿ ಹೊಂದಿದ ದೇಶಗಳು ಕಾನೂನು ರೂಪಿಸಲಿ: ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌‌:  ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಗೊಳಿಸಲು ದಶಕದೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಅದಕ್ಕೆ ಬೇಕಾದ ಕಾನೂನು ರೂಪಿಸಬೇಕು ಎಂದು ಭಾರತ ಆಗ್ರಹಿಸಿದೆ.

ಹವಾಮಾನ ಬದಲಾವಣೆ ಕಾರ್ಯಸೂಚಿಯನ್ನು ತಮ್ಮ ರಾಷ್ಟ್ರೀಯ ಕೊಡುಗೆಯ ದೃಢಸಂಕಲ್ಪವೆಂದು ಗುರಿಯಾಗಿಸಿಕೊಂಡಿರುವ ರಾಷ್ಟ್ರಗಳನ್ನು ಉಲ್ಲೇಖಿಸಿ ವಿಶ್ವ ಬ್ಯಾಂಕ್ ಎದುರು ಈ ಆಗ್ರಹವನ್ನು ಮುಂದಿಟ್ಟಿದೆ.

ಐತಿಹಾಸಿಕ ಪ್ಯಾರಿಸ್ ಒಪ್ಪಂದದ ಪ್ರಮುಖ ಅಂಶದ ಪ್ರಕಾರ,  ರಾಷ್ಟ್ರೀಯ ಕೊಡುಗೆಯ ದೃಢಸಂಕಲ್ಪ(ಎನ್‌ಡಿಸಿ)ದ ಅಡಿಯಲ್ಲಿ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ರಾಷ್ಟ್ರಗಳು ತಮ್ಮದೇ ಗುರಿಗಳನ್ನು ಇರಿಸಿಕೊಂಡಿವೆ. ಅದೇ ರೀತಿ, ಭಾರತ, ಎನ್‌ಡಿಸಿ ಅಡಿಯಲ್ಲಿ ಒಟ್ಟು ಆಂತರಿಕ ಉತ್ಪಾನೆಯ (ಜಿಡಿಪಿ) ಹಸಿರುಮನೆ ಅನಿಲ ಹೊರಸೂಸು ವಿಕೆಯ ತೀವ್ರತೆಯನ್ನು 2030 ರ ವೇಳೆಗೆ 2005 ರ ಮಟ್ಟಕ್ಕಿಂತ ಶೇ 33 ರಿಂದ 35ರಷ್ಟು ಕಡಿಮೆ ಮಾಡುವುದು ಸೇರಿದಂತೆ ನಾಲ್ಕು ಬದ್ಧತೆಗಳನ್ನು ಹೊಂದಿದೆ.

ಓದಿ: 

ಭಾರತದ ಅಭಿವೃದ್ಧಿಯ ಪ್ರಮುಖ ಅಂಶಗಳು–  ಬಡತನ ನಿರ್ಮೂಲನೆ, ಎಲ್ಲಾ ನಾಗರಿಕರಿಗೆ ಮೂಲಭೂತ ಅಗತ್ಯಗಳನ್ನು ಒದಗಿಸುವುದು ಮತ್ತು ಎಲ್ಲರಿಗೂ ಇಂಧನ ಶಕ್ತಿ ಒದಗಿಸುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದಲ್ಲಿ ವಿಶ್ವಬ್ಯಾಂಕ್‌ನ ಅಭಿವೃದ್ಧಿ ಸಮಿತಿಯನ್ನು ಉದ್ದೇಶಿಸಿ ಹೇಳಿದರು.

ಭಾರತದ ಅಭಿವೃದ್ಧಿ ಅಗತ್ಯವೆಂದರೆ ಸುಸ್ಥಿರ ಅಭಿವೃದ್ಧಿಯ ಚೌಕಟ್ಟಿನಲ್ಲಿ ಬಡತನ ನಿರ್ಮೂಲನೆ ಎಲ್ಲ ನಾಗರಿಕರಿಗೂ ಅಗತ್ಯ ಮೂಲಸೌಕರ್ಯ ಒದಗಿಸುವುದು ಮತ್ತು ಎಲ್ಲರನ್ನೂ ಬಲವರ್ಧನೆಗೊಳಿಸುವುದು ಎಂದು ವಿಶ್ವ ಬ್ಯಾಂಕ್‌ನ ಅಭಿವೃದ್ಧಿ ಸಮಿತಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

‘ಈ ಎಲ್ಲ ಚಟುವಟಿಕೆಗಳಿಗೆ ವಿಶ್ವಬ್ಯಾಂಕ್ ತನ್ನ ಬೆಂಬಲವನ್ನು ಹೆಚ್ಚಿಸುವುದು  ಉತ್ತಮ ನಡೆಯಾಗಿದೆ. ನಾವು ಹಸಿರು ಸ್ಥಿತಿಸ್ಥಾಪಕ ಮತ್ತು ಅಂತರ್ಗತ ಅಭಿವೃದ್ಧಿ (ಜಿಆರ್‌ಐಡಿ) ಕಾರ್ಯತಂತ್ರವನ್ನು ವಿಶಾಲವಾಗಿ ಬೆಂಬಲಿಸುತ್ತಿದ್ದು, ಎನ್‌ಡಿಸಿ ರಾಷ್ಟ್ರಗಳು ಹವಾಮಾನ ಬದಲಾವಣೆಗೆ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂದು ಎಚ್ಚರಿಸುತ್ತಿರುವುದಾಗಿ’ ಸೀತಾರಾಮನ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು