ಮಂಗಳವಾರ, ಸೆಪ್ಟೆಂಬರ್ 29, 2020
21 °C

ಶ್ವೇತಭವನದ ಹೊರಗಡೆ ಶಂಕಿತ ವ್ಯಕ್ತಿ ಮೇಲೆ ಗುಂಡು: ಡೊನಾಲ್ಡ್ ಟ್ರಂಪ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Donald Trump

ವಾಷಿಂಗ್ಟನ್: ಶ್ವೇತಭವನದ ಹೊರಗೆ ಶಸ್ತ್ರಧಾರಿಯಾಗಿದ್ದ ವ್ಯಕ್ತಿಯ ಮೇಲೆ ಸೀಕ್ರೆಟ್ ಸರ್ವೀಸ್ ಗಾರ್ಡ್‌ಗಳು ಗುಂಡು ಹಾರಿಸಿದ್ದಾರೆ ಎಂದು  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯನ್ನು ಅರ್ಧಕ್ಕೆ ನಿಲ್ಲಿಸಿ ಸುರಕ್ಷಿತ ಸ್ಥಳಕ್ಕೆ ಹೋದ ಮೇಲೆ ಟ್ರಂಪ್ ಈ ಮಾಹಿತಿ ನೀಡಿದ್ದಾರೆ.

ಪತ್ರಿಕಾಗೋಷ್ಠಿ ನಡೆಯುತ್ತಿದ್ದಂತೆ ಹಠಾತ್ತನೆ ನಿಲ್ಲಿಸಿ, ಶ್ವೇತಭವನದ ಸುತ್ತಲೂ ರಹಸ್ಯ ಸೇವಾ ಸಿಬ್ಬಂದಿ ಸಶಸ್ತ್ರಧಾರಿಗಳಾಗಿ ಧಾವಿಸಿದರು. ಕೆಲವು ನಿಮಿಷಗಳ ನಂತರ ಮತ್ತೆ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡ ಟ್ರಂಪ್, ಶ್ವೇತಭವನದ ಹೊರಗಡೆ ಒಬ್ಬ ವ್ಯಕ್ತಿಗೆ ಗುಂಡು ಹಾರಿಸಲಾಗಿದೆ ಎಂದು ಹೇಳಿದ್ದಾರೆ.

ಶಂಕಿತ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದು ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆ ವ್ಯಕ್ತಿ ಯಾರು? ಆತನ ಉದ್ದೇಶ ಏನು ಎಂಬುದು ತಿಳಿದಿಲ್ಲ. ಆದರೆ ಆತ ಶಸ್ತ್ರಧಾರಿಯಾಗಿದ್ದನೇ ಎಂದು ಕೇಳಿದಾಗ, ಹೌದು. ಹಾಗಂತ ನನಗೆ ತಿಳಿದು ಬಂತು ಎಂದು ಟ್ರಂಪ್ ಉತ್ತರಿಸಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು