ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.20ರಂದು ಕ್ರಮಬದ್ಧ ಅಧಿಕಾರ ಹಸ್ತಾಂತರ: ಡೊನಾಲ್ಡ್ ಟ್ರಂಪ್ ಭರವಸೆ

ಅಮೆರಿಕ ಸಂಸತ್‌ನಲ್ಲಿ ನಡೆದ ಔಪಚಾರಿಕ ಜಂಟಿ ಅಧಿವೇಶನದ ನಂತರ ಹೇಳಿಕೆ
Last Updated 7 ಜನವರಿ 2021, 10:43 IST
ಅಕ್ಷರ ಗಾತ್ರ

ವಾಷಿಂಗ್ಟನ್: ಇದೇ 20ರಂದು ನಡೆಯಲಿರುವ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಜೋ ಬೈಡನ್ ಅವರಿಗೆ ‘ಕ್ರಮಬದ್ಧವಾಗಿ ಅಧಿಕಾರ ಹಸ್ತಾಂತರಿಸಲಾಗುತ್ತದೆ ಎಂದು ನಿರ್ಗಮಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕದ ಸಂಸತ್ತಿನ ಔಪಚಾರಿಕ ಜಂಟಿ ಅಧಿವೇಶನದಲ್ಲಿ ಮುಂದಿನ ಅಮೆರಿಕದ ಅಧ್ಯಕ್ಷರನ್ನಾಗಿ ಜೋ ಬೈಡನ್ ಹಾಗೂ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಅವರ ಆಯ್ಕೆಯನ್ನು ಪ್ರಮಾಣೀಕರಿಸಿದ ಕೆಲವು ನಿಮಿಷಗಳ ನಂತರ ಟ್ರಂಪ್ ಈ ರೀತಿ ಹೇಳಿಕೆ ನೀಡಿದ್ದಾರೆ.

ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಯ ನಂತರ, ಗುರುವಾರ ಎಲೆಕ್ಟ್ರೊಲ್ ಮತಗಳ ಎಣಿಕೆ ಹಾಗೂ ವಿಜೇತರನ್ನು ಪ್ರಮಾಣೀಕರಿಸುವ ಪ್ರಕ್ರಿಯೆ ನಡೆದಿತ್ತು. ಇದಾದ ನಂತರ ಔಪಚಾರಿಕ ಜಂಟಿ ಅಧಿವೇಶನವೂ ನಡೆಯಿತು.

‘ಚುನಾವಣೆಯ ಫಲಿತಾಂಶವನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಆದರೆ ಸತ್ಯಗಳನ್ನು ನಾನು ಹೊರ ಹಾಕಿದ್ದೇನೆ. ಆದರೂ, ಜನವರಿ 20 ರಂದು ಕ್ರಮಬದ್ಧವಾದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ’ ಎಂದು ಟ್ರಂಪ್ ಹೇಳಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT